Breaking Posts

6/trending/recent
Type Here to Get Search Results !

8:10:45

ಹತ್ತು ದಿನಗಳ ಬಾಣಂತಿ ಯೋರ್ವಳ ಮೃತದೇಹ ಮಧ್ಯರಾತ್ರಿ ಬಾವಿಯಲ್ಲಿ ಪತ್ತೆ. ಆತ್ಮಹತ್ಯೆ ಎಂಬುದಾಗಿ ಪ್ರಾಥಮಿಕ ವರದಿ.

ಹತ್ತು ದಿನಗಳ ಬಾಣಂತಿ ಯೋರ್ವಳ ಮೃತದೇಹ ಮಧ್ಯರಾತ್ರಿ ಬಾವಿಯಲ್ಲಿ ಪತ್ತೆ. ಆತ್ಮಹತ್ಯೆ ಎಂಬುದಾಗಿ ಪ್ರಾಥಮಿಕ ವರದಿ.
ಕಾಸರಗೋಡು: ಹತ್ತು ದಿನಗಳ ಬಾಣಂತಿಯೋರ್ವಳ ಮೃತದೇಹ ಮನೆ ಪರಿಸರದ ಬಾವಿಯಲ್ಲಿ ನಿನ್ನೆ ತಡರಾತ್ರಿ ಪತ್ತೆಯಾಗಿದೆ. ಕೂಡ್ಲು ಪಾರೆಕಟ್ಟೆ ನಿವಾಸಿ ಸೋಮನಾಥ ಆಚಾರ್ಯರ ಪುತ್ರಿ,
ಕಂಬಾರು ಬೆದ್ರಡ್ಕದಲ್ಲಿ ಪೋಸ್ಟು ಮಾಸ್ತರ್ ವೃತ್ತಿಯಲ್ಲಿದ್ದ ಸುರೇಖ (29) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ. ಮೀಂಜ ಗ್ರಾಮ ಪಂಚಾಯಾತ್ ಗೊಳಪಟ್ಟ ಜೋಡುಕಲ್ಲು ಬಳಿಯ ಅರಿಯಾಳ ನಿವಾಸಿ ಬಡಗಿ ವೃತ್ತಿ ಮಾಡುತ್ತಿರುವ ಜಯ ಕುಮಾರ್ ಆಚಾರ್ಯರ ಧರ್ಮಪತ್ನಿ ಸುರೇಖ ಮೃತಪಟ್ಟ ದುರ್ದೈವಿ. ಕಳೆದ ಹತ್ತು ದಿನಗಳ ಹಿಂದೆ ಬಾಣಂತಿಯಾಗಿ ತವರು ಮನೆಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದ ಸುರೇಖ ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದರು. ಇವರ ಪಕ್ಕ ತಾಯಿ, ಅತ್ತೆ ಮತ್ತು ಸಮೀಪದ ಕೊಠಡಿಯಲ್ಲಿ ಪತಿ ಮಲಗಿದ್ದರು. ರಾತ್ರಿ 1 ಗಂಟೆಯ ಸುಮಾರಿಗೆ ಮಗು ಅಳುತ್ತಿದ್ದು ಮನೆಯವರು ಎದ್ದು ನೋಡಿದಾಗ ಸುರೇಖ ಮಲಗಿದ್ದಲ್ಲಿ ಇರಲಿಲ್ಲ. ಬಳಿಕ ನಡೆಸಿದ ಹುಡುಕಾಟದಲ್ಲಿ ಮನೆಯಿಂದ ಅಲ್ಪ ದೂರದಲ್ಲಿರುವ ಖಾಸಗಿ ವ್ಯಕ್ತಿಯ ಬಾವಿ ಬಳಿ ಟಾರ್ಚ್ ಲೈಟ್ ಪತ್ತೆಯಾಗಿದ್ದು ಈ ಹಿನ್ನಲೆಯಲ್ಲಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿತ್ತು. ಬಾಣಂತಿ ಸಮಯದಲ್ಲಿ ಆಪರೇಷನ್ ಕಳೆದಿದ್ದ ಸುರೇಖರಿಗೆ ತೀವ್ರ ಹೊಟ್ಟೆ ನೋವು ಕಾಡುತ್ತಿರುವುದಾಗಿ ತಿಳಿಸುತ್ತಿದ್ದು ಈ ನಡುವೆ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿರಬೇಕೆಂದು ಪೋಲಿಸರು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ. ಪೋಸ್ಟು ಮಾಸ್ತರ್ ಹುದ್ದೆಯಲ್ಲಿದ್ದ ಸುರೇಖ ಎಲ್ಲರೊಡನೆ ಆತ್ಮೀಯತೆಯಿಂದ ಇದ್ದು, ಸರ್ವರ ಪ್ರೀತಿಗೆ ಪಾತ್ರಳಾಗಿದ್ದಳು. ಶಾಸ್ತ್ರೀಯ ಸಂಗೀತ ಕಲಿತು ವಯಲಿನ್ ವಾದಕಿಯಾಗಿದ್ದಳು. ಮೃತರು ಪತಿ, ಹತ್ತು ದಿನದ ಗಂಡು ಮಗು, ತಂದೆ, ತಾಯಿ ರೇವತಿ, ಸಹೋದರಿ ರೇಖ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ. ಮೃತದೇಹ ಕಾಸರಗೋಡಿನ ಸರಕಾರಿ ಆಸ್ಪತ್ರೆಯಲ್ಲಿದ್ದು, ಶವ ಮಹಜರಿನ ಬಳಿಕ ಕಾಸರಗೋಡಿನ ಪಾರೆಕಟ್ಟೆಯಲ್ಲಿರುವ ತವರು ಮನೆಗೆ ಅಪರಾಹ್ನ 3 ಗಂಟೆಗೆ ತಲುಪಲಿದೆ. ವಿಧಿ ವಿಧಾನಗಳು ನಡೆದು ಬಳಿಕ ಪಾರೆಕಟ್ಟೆಯಲ್ಲಿರುವ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಎಂದು ಮನೆ ಮಂದಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.