Breaking Posts

6/trending/recent
Type Here to Get Search Results !

8:10:45

ತುಳು ಭಾಷೆಯನ್ನು 8 ನೇ ಪರಿಚ್ಛೇಧದಲ್ಲಿ ಸೇರ್ಪಡೆ ಮತ್ತು ಮಂಜೇಶ್ವರ ರೈಲ್ವೇ ಸ್ಟೇಷನಿನ ಅವಗಣನೆ ಹರ್ಷಾದ್ ವರ್ಕಾಡಿ ಹೇಳಿಕೆ ದೌರ್ಭಾಗ್ಯಕರ - ಬಿ.ವಿ ರಾಜನ್.

ತುಳು ಭಾಷೆಯನ್ನು 8 ನೇ ಪರಿಚ್ಛೇಧದಲ್ಲಿ ಸೇರ್ಪಡೆ ಮತ್ತು ಮಂಜೇಶ್ವರ ರೈಲ್ವೇ ಸ್ಟೇಷನಿನ ಅವಗಣನೆ ಹರ್ಷಾದ್ ವರ್ಕಾಡಿ ಹೇಳಿಕೆ ದೌರ್ಭಾಗ್ಯಕರ - ಬಿ.ವಿ ರಾಜನ್. ಮಂಜೇಶ್ವರ: ಕಾಸರಗೋಡು ಸಂಸತ್ ಸದಸ್ಯ ರಾಜ್ ಮೋಹನ್ ಉಣ್ಣಿತ್ತಾನ್ ರವರ ಉಪವಾಸ ಸತ್ಯಾಗ್ರಹಕ್ಕೆ ಅಭಿನಂದನೆ ಸಲ್ಲಿಸುತ್ತಾ ಕಾಂಗ್ರೆಸ್ ಮುಖಂಡ ಹರ್ಷಾದ್ ವರ್ಕಾಡಿಯವರು ಭಾಷಣದಲ್ಲಿ ಪ್ರಸ್ತುತ ಪಡಿಸಿದ ವಿಷಯ ದೌರ್ಭಾಗ್ಯಕರ ಮತ್ತು ಜನತೆಗೆ ತಪ್ಪು ಮಾಹಿತಿ ನೀಡುವಂತದ್ದು ಆಗಿದೆಯೆಂದು ಸಿಪಿಐ ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ ರಾಜನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇಧ ದಲ್ಲಿ ಒಳಪಡಿಸುವರೇ ಮತ್ತು ಮಂಜೇಶ್ವರ ರೈಲ್ವೆ ಸ್ಟೇಷನನ್ನು ಹಿಂದಿನ ಎಡಪಕ್ಷ ಸಂಸತ್ ಸದಸ್ಯರು ಅವಗಣಿಸಿದ್ದರು ಎಂದು ಟೀಕಿಸಿ, ಈ ಕಾರ್ಯದರ್ಶಿ ಈಗಿನ ಸಂಸತ್ ಸದಸ್ಯರು ಸುತ್ತಿಸಿಕೊಂಡು ಹರ್ಷಾದ್ ತಿಳಿಸಿದ ವಿಷಯ ಅತ್ಯಂತ ದೌರ್ಭಾಗ್ಯಕರ ಮತ್ತು ಜನತೆಯನ್ನು ತಪ್ಪು ಹಾದಿಗೆ ಎಳೆಯುವಂತಾಗಿದ್ದು ಎಂದು ಬಿ.ವಿ ರಾಜನ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಸುಧೀರ್ಘ ಕಾಲದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದ ಸರಕಾರ ಹಾಗೂ 2014 ರಿಂದ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ತುಳು ಭಾಷೆಯನ್ನು 8 ನೇ ಪರಿಚ್ಛೇಧದಲ್ಲಿ ಸೇರ್ಪಡೆಗೊಳಿಸದೆ ತುಳುನಾಡಿನ ಜನತೆಯನ್ನು ವಂಚಿಸುತ್ತಾ ಬಂದಿದ್ದಾರೆ. ಲೋಕಸಭೆಯಲ್ಲಿ ಪ್ರಥಮ ಬಾರಿಗೆ ಈ ವಿಷಯವನ್ನು ಎತ್ತಿ ತೋರಿಸಿ ಪ್ರಪ್ರಥಮವಾಗಿ ಮಾತನಾಡಿದ ಸಂಸತ್ ಸದಸ್ಯ ಪಿ.ಕರುಣಾಕರನ್ ಎಂಬುದನ್ನ ಹರ್ಷಾದ್ ವರ್ಕಾಡಿ ಮರೆತು ಹೋಗಿದ್ದಾರೆ. ಇದಕ್ಕೆ ಲೋಕಸಭಾ ಕಾರ್ಯಕಲಾಪದಲ್ಲಿ ದಾಖಲೆಗಳಿವೆ. ಅಂದು ಲೋಕಸಭೆಯಲ್ಲಿ ಪಿ. ಕರುಣಾಕರನ್ ಇದರ ಬಗ್ಗೆ ಮಾತನಾಡದಾಗ ಎಲ್ಲಾ ಪತ್ರಿಕೆಗಳು ಧೃಶ್ಯ ಮಾಧ್ಯಮಗಳು ವಾರ್ತೆಯನ್ನು ನೀಡಿ ಕರುಣಾಕರನ್ ರನ್ನು ಅಭಿನಂದಿಸಿದ್ದು ಎಲ್ಲರಿಗೂ ತಿಳಿದ ವಿಷಯ. ಅದೇ ಹೊತ್ತಿನಲ್ಲಿ ರಾಜ್ಯಸಭೆಯಲ್ಲಿ ತುಳು ಭಾಷೆಯನ್ನು 8 ನೇ ಪರಿಚ್ಛೇಧದಲ್ಲಿ ಸೇರ್ಪಡೆಗೊಳಿಸಬೇಕೆಂದು ಸಿಪಿಐ ಪಕ್ಷದ ರಾಜ್ಯ ಸಭಾ ಸದಸ್ಯ ಪಿ. ಸಂತೋಷ್ ಕುಮಾರ್ ಖಾಸಗಿ ಮಸೂದೆಯೊಂದನ್ನು ಮಂದಿಸಿದ ವಾರ್ತೆ ಎಲ್ಲಾ ಕನ್ನಡ, ಮಲಯಾಳಂ ಪತ್ರಿಕೆಗಳು ಬಹಳ ಚೆನ್ನಾಗಿ ವರದಿ ಮಾಡಿದ್ದವು. ಹೀಗಿದ್ದು ಈ ವಿಷಯಗಳನ್ನು ತಿಳಿಯದೆ ಹರ್ಷಾದ್ ವರ್ಕಾಡಿ ಟೀಕಿಸುವುದು ಸರಿಯಲ್ಲ.
ಇನ್ನು ಮಂಜೇಶ್ವರ ರೈಲ್ವೇ ಸ್ಟೇಷನ್ ಬಗ್ಗೆ ಹೇಳುವುದಾದರೆ ಕಡನಪಳ್ಳಿ ರಾಮಚಂದ್ರನ್, ಐ ರಾಮ ರೈ ಸಂಸತ್ ಸದಸ್ಯರಾಗಿದ್ದ ಕಾಲದಿಂದಲೂ ಅವಗಣನೆ ಮುಂದುವರಿಯುತ್ತಾ ಬಂದಿದೆ. ಎಡಪಕ್ಷಗಳ ಸಂಸತ್ ಸದಸ್ಯರುಗಳ ನಿರಂತರ ಒತ್ತಾಯದಿಂದ ಲಾಲು ಪ್ರಸಾದ್ ಯಾದವ್ ರೈಲ್ವೇ ಸಚಿವರಾಗಿದ್ದಾಗ ಮಂಜೇಶ್ವರ ರೈಲ್ವೇ ಸ್ಟೇಷನನ್ನು ಆದರ್ಶ ರೈಲ್ವೇ ಸ್ಟೇಷನ್ ಯೋಜನೆಯಲ್ಲಿ ಒಳಪಡಿಸಿ ಪ್ರಖ್ಯಾಪನೆ ನಡೆಸಿದ್ದರು. ಆದರೆ ಬಜೆಟ್ ನಲ್ಲಿ ಬರೇ ಸಾಂಕೇತಿಕ ಟೋಕನ್ ಅಡ್ವಾನ್ಸ್ ನೀಡಿದ್ದಲ್ಲದೇ ಏನೂ ನಡೆಯಲಿಲ್ಲ. ರಾಜ್ ಮೋಹನ್ ಉಣ್ಣಿತ್ತಾನ್ ಸಂಸತ್ ಸದಸ್ಯರಾದ ಬಳಿಕ ಮಂಜೇಶ್ವರ ರೈಲ್ವೇ ಸ್ಟೇಷನ್ ಅಭಿವೃದ್ಧಿಗಾಗಿ ಯಾವ ರೀತಿಯ ಪ್ರಯತ್ನ ನಡೆಸಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ರೈಲ್ವೇ ಪ್ಯಾಸೆಂಜರ್ಸ್ ಅಮಿನಿಟಿ ಬೋರ್ಡ್ ಚೆಯರ್ ಮ್ಯಾನ್ ಪಿ.ಕೆ ಕೃಷ್ಣ ದಾಸ್ ಇತ್ತೀಚೆಗೆ ಮಂಜೇಶ್ವರ ರೈಲ್ವೇ ಸ್ಟೇಷನ್ ಸಂದರ್ಶಿಸಿದಾಗ ಅವರಿಗೆ ಒಂದು ವಿವರವಾದ ಮನವಿಯನ್ನು ನೀಡಿದ್ದೇವೆ.ಹರ್ಷಾದ್ ಅವಶ್ಯ ಪಡುವುದಾದರೆ ಅದರ ಪ್ರತಿಯನ್ನು ಕಳುಹಿಸಿ ಕೊಡುತ್ತೇನೆ. ಅದೇ ರೀತಿಯ ಮನವಿಯನ್ನು ಸಂಸತ್ ಸದಸ್ಯ ರಾಜ್ ಮೋಹನ್ ಉಣ್ಣಿತ್ತಾನ್ ರವರಿಗೆ ಸ್ಪೀಡ್ ಪೋಸ್ಟ್ ಮೂಲಕ ಅವರ ನಿವಾಸಕ್ಕೆ ಮನವಿಯನ್ನು ಕಳುಹಿಸಿ ಕೊಟ್ಟಿದ್ದೇವೆ. ರೈಲುಗಳಿಗೆ ಮಂಜೇಶ್ವರದಲ್ಲಿ ನಿಲುಗಡೆ ನೀಡುವ ಬಗ್ಗೆ ರೈಲ್ವೇ ಸಚಿವರ ಗಮನಕ್ಕೆ ತಂದು ಪ್ರಯತ್ನಿಸುವುದಾಗಿ ಪಿ.ಕೆ ಕೃಷ್ಣದಾಸ್ ಭರವಸೆ ನೀಡಿದ್ದಾರೆ. ಪ್ಲಾಟ್ ಫಾರ್ಮ್ ಅಭಿವೃದ್ಧಿಗೆ 2.25 ಕೋಟಿ ರೂಪಾಯಿ ಮಂಜೂರು ಮಾಡುವುದಾಗಿ ಸ್ಥಳದಲ್ಲೇ ಪ್ರಖ್ಯಾಪಿಸಿದ್ದಾರೆ. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ, ಗ್ರಾಮ ಪಂಚಾಯತ್ ಸದಸ್ಯರು, ಅಭಿವೃದ್ಧಿ ಸಮಿತಿಯ ನೈನಾರ್, ಸಿಪಿಐ ಬ್ರಾಂಚ್ ಸಹ ಕಾರ್ಯದರ್ಶಿ ಶನೀಶ್ ಮೊದಲಾದವರು ಉಪಸ್ಥಿತರಿದ್ದರು.ಇದಲ್ಲದೆ ಇದಕ್ಕಿಂತ ಹೆಚ್ಚಿನ ಯಾವುದಾದರೂ ಪ್ರಯತ್ನ ಯಾರ ಭಾಗದಿಂದಾರೂ ಉಂಟಾಗಿದ್ದಲ್ಲಿ ಅದನ್ನು ಸಂಬಂಧಪಟ್ಟವರು ಸ್ಪಷ್ಟ ಪಡಿಸಬೇಕೆಂದು ಬಿ.ವಿ ರಾಜನ್ ಒತ್ತಾಯಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.