ಹಿರಿಯ ಪಾಕ ಶಾಸ್ತ್ರಜ್ಞ, ಡಾ. ರಾಜ್ ಕುಮಾರ್ ರ ಚಲನಚಿತ್ರ ಚಿತ್ರೀಕರಣ ಟೆಂಟ್ ನಲ್ಲಿ ಬಾಣಸಿಗರಾಗಿ ಸೇವೆ ಸಲ್ಲಿಸಿದ ಮಂಜೇಶ್ವರದ ಚರುಂಬುರಿ ವ್ಯಾಪಾರಿ ವಾಮನ್ ಉದ್ಯಾವರ (70) ನಿಧನ.
ಸೆಪ್ಟೆಂಬರ್ 24, 2023
0
ಹಿರಿಯ ಪಾಕ ಶಾಸ್ತ್ರಜ್ಞ, ಡಾ. ರಾಜ್ ಕುಮಾರ್ ರ ಚಲನಚಿತ್ರ ಚಿತ್ರೀಕರಣ ಟೆಂಟ್ ನಲ್ಲಿ ಬಾಣಸಿಗರಾಗಿ ಸೇವೆ ಸಲ್ಲಿಸಿದ ಮಂಜೇಶ್ವರದ ಚರುಂಬುರಿ ವ್ಯಾಪಾರಿ ವಾಮನ್ ಉದ್ಯಾವರ (70) ನಿಧನ.
ಮಂಜೇಶ್ವರ: ಹಿರಿಯ ಪಾಕ ಶಾಸ್ತ್ರಜ್ಞರೂ, ಪ್ರಸ್ತುತ ಚರುಂಬುರಿ ವ್ಯಾಪಾರಸ್ತರಾಗಿ ಪ್ರಸಿದ್ದಿ ಪಡೆದ ಮಂಜೇಶ್ವರ ಬಳಿಯ ಉದ್ಯಾವರ ಕರ್ಗಿ ಕಾಂಪೌಂಡ್ ನಿವಾಸಿ ವಾಮನ ಉದ್ಯಾವರ (70) ನಿಧನರಾದರು. ದಿ. ಪೂವಪ್ಪ ಬೆಲ್ಚಾಡ - ದಿ. ಲಕ್ಷ್ಮಿ ದಂಪತಿಯ ಪುತ್ರರಾಗಿರುವ ವಾಮನ ರವರು ಕಳೆದ 40 ವರ್ಷಗಳ ಹಿಂದೆ ಮಂಗಳೂರು ಮೋತಿ ಮಹಲ್ ಹೋಟೆಲ್ ನಲ್ಲಿ ಪಾಕ ಶಾಸ್ತ್ರಜ್ಞರಾಗಿ, ಸೇವೆ ಸಲ್ಲಿಸಿದ್ದರು. ಇವರ ಕೈ ರುಚಿ ಕಂಡ ಅನೇಕರು ನಿತ್ಯ ಹೋಟೆಲ್ ಗೆ ಆಗಮಿಸಿ, ತಿಂಡಿ ತಿನಿಸುಗಳನ್ನು ಸವಿಯುತ್ತಿದ್ದರು. ಇವರು ತಯಾರಿಸಿದ ಅನೇಕ ತಿಂಡಿಗಳನ್ನು ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ ಕುಮಾರ್ ಮಂಗಳೂರಿಗೆ ಆಗಮಿಸಿದ ವೇಳೆ ಸವಿದಿದ್ದರು. ಅಲ್ಲದೇ ಇವರನ್ನ ಮಡಿಕೇರಿಯಲ್ಲಿ ನಡೆದ ಚಿತ್ರವೊಂದರ ಶೂಟಿಂಗ್ ಗೆ ಕರೆಸಿ, ಚಿತ್ರೀಕರಣ ಪೂರ್ಣಗೊಳ್ಳುವ ತನಕ ಟೆಂಟ್ ನಲ್ಲಿ ಬಾಣಸಿಗನಾಗಿ ನೇಮಿಸಿ, ಮಂಗಳೂರಿನ ಮೀನಿನ ಪದಾರ್ಥದ ಖ್ಯಾದ್ಯಗಳನ್ನು, ಪುಂಡಿಗಸಿ, ಸೇರಿದಂತೆ ಹಲವಾರು ತಿಂಡಿ ತಿನಿಸುಗಳನ್ನು ಮಾಡಿಸಿ ಸವಿದಿದ್ದರು. ಚಿತ್ರನಟ ರಾಜ್ ಕುಮಾರ್ ಗೆ ವಾಮನ್ ರವರು ಆತ್ಮೀಯರಾದರು. ಮುಂದೆ ನಡೆಯುವ ಚಿತ್ರಗಳ ಶೂಟಿಂಗ್ ಟೆಂಟ್ ಗೆ ಪರ್ಮ್ ನೆಂಟ್ ಬಾಣಸಿಗನಾಗಿ ಆಹ್ವಾನ ಬಂದರೂ, ಮನೆಯ ಜವಾಬ್ದಾರಿಯ ನಡುವೆ ದೂರದ ಊರಿಗೆ ತೆರಳಲು ಕಷ್ಟಕರವಾದ ಸಮಯವು ಅದಾಗಿತ್ತು. ಬಳಿಕ ಮಂಗಳೂರಿನಲ್ಲಿ ಚರುಂಬುರಿ ವ್ಯಾಪಾರಕ್ಕೆ ತೊಡಗಿದರು. ಇದೀಗ ಹಲವು ವರ್ಷಗಳಿಂದ ಮಂಜೇಶ್ವರ ಪರಿಸರದಲ್ಲಿ ನಡೆಯುವ ಜಾತ್ರೆ, ಉತ್ಸವ, ಬ್ರಹ್ಮಕಲಶ, ಮಸೀದಿಯ ಉರೂಸ್, ಚರ್ಚ್ ನ ವಾರ್ಷಿಕ ಸ್ಥಳದಲ್ಲಿ ಇವರು ಚರುಂಬುರಿ ಸ್ಟಾಲ್ ಹಾಕಿ ವ್ಯಾಪಾರ ಆರಂಬಿಸಿದರು. ಇವರ ಚರುಂಬುರಿ ವ್ಯಾಪಾರ ಹಾಗೂ ಸಾರ್ಥಕ ಸೇವೆಗೆ ಕೈರುಚಿ ಸವಿದ ಅನೇಕ ಮಂದಿ ಇವರನ್ನ ಅಭಿನಂದಿಸಿದ್ದೂ ಇವೆ. ಈ ನಡುವೆ ಇವರಿಗೆ "ಆನೆಕಾಲು ರೋಗ" ತಗುಲಿದ ಕಾರಣ ಕಾಲು ತೋರವಾದರೂ ಹೇಗಾದರೂ ಸಂಭಾಳಿಸಿಕೊಂಡು, ಹೊಟ್ಟೆಪಾಡಿಗಾಗಿ ಚರುಂಬುರಿ ವ್ಯಾಪಾರ ಮಾಡುತ್ತಿದ್ದರು. ಪತ್ನಿ ಸುಂದರಿ ಅಸೌಖ್ಯ ನಿಮ್ಮಿತ ಕಳೆದ ಒಂದು ತಿಂಗಳ ಹಿಂದೆ ನಿಧನ ಹೊಂದಿದ್ದು, ಪತ್ನಿಯ ಅಗಲುವಿಕೆಯ ನೋವು ಮಾಸುವ ಮೊದಲೇ ವಾಮನರವರು ಇದೀಗ ನಿಧನರಾಗಿದ್ದು, ಮನೆ ಮಂದಿ ದುಃಖದ ಕಡಲಲ್ಲಿ ಮುಳುಗಿದ್ದಾರೆ. ಮೃತರು ಮಕ್ಕಳಾದ ಪ್ರಮೀಳಾ, ಆಶಾ, ಪ್ರವೀಣ್, ಸೊಸೆ: ವಿದ್ಯಾ, ಅಳಿಯಂದಿರಾದ: ಕುದ್ರೋಳಿ ಭಗವತೀ ಕ್ಷೇತ್ರದ ಆತಾರ್ ಅಜಿತ್ ಬೆಲ್ಚಾಡ, ಲೋಕೇಶ್ ಮುಡಿಪು, ಸಹೋದರ - ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
