ಕಾಂಗ್ರೆಸ್ ಮೀಂಜ ಮಂಡಲದ ಮಾಜಿ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ (70) ನಿಧನ.
ಸೆಪ್ಟೆಂಬರ್ 04, 2023
0
ಕಾಂಗ್ರೆಸ್ ಮೀಂಜ ಮಂಡಲದ ಮಾಜಿ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ (70) ನಿಧನ.
ಮಂಜೇಶ್ವರ: ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರೂ, ಪ್ರಗತಿಪರ ಕೃಷಿಕರೂ ಆಗಿದ್ದ ಮಜಿಬೈಲು ಬಳಿಯ ಮೂಡಂಬೈಲು ನಿವಾಸಿ ಕೆ.ಸತ್ಯನಾರಾಯಣ ಕಲ್ಲೂರಾಯ (70) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇದೀಗ ಸಂಜೆ ನಿಧನ ಹೊಂದಿದ್ದಾರೆ. ಕಳೆದ 12 ವರ್ಷಗಳ ಕಾಲ ಮೀಂಜ ಮಂಡಲ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಇವರು ಸುದೀರ್ಘ ಕಾಲ ಮೀಂಜ ಪಂಚಾಯತು ಕೃಷಿ ಅಭಿವೃದ್ಧಿಯ ಸದಸ್ಯರಾಗಿದ್ದರು. ಚಂದ್ರಿಕಾ ರಾವ್ (ಪತ್ನಿ), ಚರಣ್ (ಪುತ್ರ) ಶೃತಿ (ಸೊಸೆ), ವರ್ಷಿಣಿ (ಮಗಳು), ವಿಶ್ವದತ್ತ(ಅಳಿಯ),, ಕೃಷ್ಣರಾವ್ (ಸಹೋದರ), ನಳಿನಿ, ಜಯಂತಿ, ಸೀತಾರತ್ನ, ವಿದ್ಯಾ, ಶೈಲಾ,
ದಿ.ವೀಣಾ (ಸಹೋದರಿಯರು) ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸೋಮಪ್ಪ, ಜಿ.ಪಂ.ಮಾಜೀ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಜಗದೀಶ್ ಮೂಡಂಬೈಲು,ಹವ್ಯಾಸಿ ಪತ್ರಕರ್ತ ವಿಜಯ್ ಕುಮಾರ್ ಶೆಟ್ಟಿ ಗಾಣದಮೂಲೆ (ಯು.ಎ.ಇ) ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
