ಹೊಸಂಗಡಿ ಹಿಲ್ ಸೈಡ್ ಟಾಕೀಸ್ ನಲ್ಲಿ ಟಿಕೆಟ್ ನೀಡುತ್ತಿದ್ದ, ಪ್ರಸ್ತುತ ಗೂಡಂಗಡಿ ವ್ಯಾಪಾರಿ ಬಂಗ್ರ ಮಂಜೇಶ್ವರ ಕೊಪ್ಪಳ ನಿವಾಸಿ ದಾಮೋದರ (66) ನಿಧನ.
ಸೆಪ್ಟೆಂಬರ್ 29, 2023
0
ಹೊಸಂಗಡಿ ಹಿಲ್ ಸೈಡ್ ಟಾಕೀಸ್ ನಲ್ಲಿ ಟಿಕೆಟ್ ನೀಡುತ್ತಿದ್ದ, ಪ್ರಸ್ತುತ ಗೂಡಂಗಡಿ ವ್ಯಾಪಾರಿ ಬಂಗ್ರ ಮಂಜೇಶ್ವರ ಕೊಪ್ಪಳ ನಿವಾಸಿ ದಾಮೋದರ (66) ನಿಧನ.
ಮಂಜೇಶ್ವರ: ಮೂಲತಃ ಮಂಗಳೂರು ನೀರುಮಾರ್ಗ ನಿವಾಸಿಯೂ, ಪ್ರಸ್ತುತ ಬಂಗ್ರ ಮಂಜೇಶ್ವರ, ಕೊಪ್ಪಳದಲ್ಲಿ ವಾಸಿಸುತ್ತಿರುವ ದಾಮೋದರ (66) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಇಂದು ರಾತ್ರಿ 8.45 ಕ್ಕೆ ಸ್ವ - ಗೃಹದಲ್ಲಿ ನಿಧನರಾದರು. ಮೃತರು ಹೊಸಂಗಡಿ ಹಿಲ್ ಸೈಡ್ ಚಿತ್ರ ಮಂದಿರದಲ್ಲಿ 10 ವರ್ಷಗಳ ಕಾಲ ಟಿಕೆಟ್ ಕೌಂಟರ್ ನಲ್ಲಿ ಕೆಲಸ ಮಾಡುತ್ತಿದ್ದು, ಚಿತ್ರ ಮಂದಿರ ಮುಚ್ಚುಗಡೆಗೊಂಡ ಬಳಿಕ ಕೋಟೆಕಾರ್ ಬೀರಿಯಲ್ಲಿರುವ ಕೊಂಡಾಣ ದ್ವಾರದ ಬಳಿ ಗೂಡಂಗಡಿ ವ್ಯಾಪಾರಿ ಯಾಗಿದ್ದರು. ಮೃತರು ಪತ್ನಿ: ಜಯಶಾಂತಿ ಮಕ್ಕಳಾದ ವಿಶಾಲ್, ಗಣೇಶ್, ಸೊಸೆಯಂದಿರಾದ ಮೋನಿಕ, ದೀಕ್ಷಿತ ಸಹೋದರ ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ 11:00 ಗಂಟೆಗೆ ರಾಮತ್ತ ಮಜಾಲು ಸಾರ್ವಜನಿಕ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.
