Breaking Posts

6/trending/recent
Type Here to Get Search Results !

8:10:45

'ಸುಲಭ್ ಶೌಚಾಲಯ' ಸ್ಥಾಪಕ ಬಿಂದೇಶ್ವರ್ ಪಾಠಕ್ ನಿಧನಕ್ಕೆ ಎಲ್.ಡಿ. ಎಫ್, ಸಿಪಿಐ ಮಂಜೇಶ್ವರ ಸಂತಾಪ.

'ಸುಲಭ್ ಶೌಚಾಲಯ' ಸ್ಥಾಪಕ ಬಿಂದೇಶ್ವರ್ ಪಾಠಕ್ ನಿಧನಕ್ಕೆ ಎಲ್.ಡಿ. ಎಫ್, ಸಿಪಿಐ ಮಂಜೇಶ್ವರ ಸಂತಾಪ.
ಮಂಜೇಶ್ವರ: ಶುಚಿತ್ವವನ್ನು ಪೂರ್ಣ ಅರ್ಥದಲ್ಲಿ ಕಾಪಾಡಿ ಕೊಂಡು ಬರುವಲ್ಲಿ ಮಹತ್ತರ ಕೊಡುಗೆ ಸಲ್ಲಿಸಿದ ಭಾರತದಲ್ಲೇ ಪ್ರಥಮ ಬಾರಿಗೆ ಸುಲಭ್ ಶೌಚಾಲಯ ಎಂಬ ಯೋಜನೆಯನ್ನು ರೂಪೀಕರಿಸಿ ಜ್ಯಾರಿಗೆ ತಂದ, 1991 ರಲ್ಲಿ ಪದ್ಮ ಭೂಷಣ ಪ್ರಶಸ್ತಿ ವಿಜೇತರಾದ ಬಿಂದೇಶ್ವರ್ ಪಾಠಕ್ ಎಂಬ ಸಾಧಕ ಈ ಕಳೆದ ಸ್ವಾತಂತ್ರ್ಯ ದಿನದಂದು ನಮ್ಮನ್ನು ಅಗಲಿದರು. ಅವರಿಗೆ ನಿಧನದ ಸಂದರ್ಭದಲ್ಲಿ 80 ವಯಸ್ಸಾಗಿತ್ತು. 2017 ರಲ್ಲಿ ಲಾಲ್ ಬಹುದ್ದೂರ್ ಶಾಸ್ತ್ರೀ ಸ್ಮಾರಕ ಪುರಸ್ಕಾರಗಳನ್ನು ಪಡೆದವರಾಗಿದ್ದಾರೆ.
1970 ರಲ್ಲಿ 'ಸುಲಭ್ ಇಂಟರ್ ನ್ಯಾಷನಲ್ ಸೋಷಿಯನ್ ಸರ್ವಿಸ್ ಆಗ್ರನೇಶನ್' ಎಂಬ ಸಂಸ್ಥೆಯನ್ನು ಸ್ಥಾಪಿಸಿದ ಈ ಮಹಾನ್ ವ್ಯಕ್ತಿಯ ಸಂಸ್ಥೆಯಲ್ಲಿ ಸುಮಾರು 50 ಸಾವಿರ ಸ್ವಯಂ ಸೇವಕರಿದ್ದಾರೆ ಎಂದು ತಿಳಿದು ಬಂದಿದೆ. ಪಾಠಕ್ ರವರ ಸುಲಭ್ ಶೌಚಾಲಯ ನಿರ್ಮಾಣವನ್ನು ನಮ್ಮ ನಾಡಿನಲ್ಲಿ ವ್ಯಾಪಕವಾಗಿ ಜ್ಯಾರಿಗೊಳಿಸಲು ಸರಕಾರಗಳು ಆಲೋಚಿಸಿದರೆ ನಮ್ಮ ನಾಡು ಶುಚಿತ್ವದ ಕರ್ಮ ಭೂಮಿಯಾಗುವುದೆಂಬುದರಲ್ಲಿ ಸಂಶಯವಿಲ್ಲ. ಈ ಮಹಾನ್ ಚೇತನದ ಅಗಲುವಿಕೆ ತುಂಬಲಾರದ ನಷ್ಟವಾಗಿದ್ದು ಅವರ ಸ್ಮರಣೆಗೆ ಎಲ್.ಡಿ.ಎಫ್ ಹಾಗೂ ಸಿ.ಪಿ.ಐ ಶ್ರದ್ಧಾಂಜಲಿ ಅರ್ಪಿಸುತ್ತದೆ ಎಂದು ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ ರಾಜನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.