ಕನಿಲ ಫ್ರೆಂಡ್ಸ್ ಕ್ಲಬ್ (ರಿ.) ಕನಿಲ ವತಿಯಿಂದ ಶರತ್ ಅನ್ನು ಸ್ಮರಣಾರ್ಥ ಉಚಿತ ಹೃದಯ ವೈದ್ಯಕೀಯ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರ.
ಆಗಸ್ಟ್ 09, 2023
0
ಕನಿಲ ಫ್ರೆಂಡ್ಸ್ ಕ್ಲಬ್ (ರಿ.) ಕನಿಲ ವತಿಯಿಂದ ಶರತ್ ಅನ್ನು ಸ್ಮರಣಾರ್ಥ ಉಚಿತ ಹೃದಯ ವೈದ್ಯಕೀಯ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರ.
ಮಂಜೇಶ್ವರ: ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಹಾಗೂ ಇಂಡಿಯನ್ ಬ್ಲಡ್ ಡೋನರ್ಸ್ ಸೊಸೈಟಿ ಇದರ ಸಹಭಾಗಿತ್ವದಲ್ಲಿ ಕನಿಲ ಫ್ರೆಂಡ್ಸ್ ಕ್ಲಬ್ (ರಿ.) ಕನಿಲ, ಮಂಜೇಶ್ವರ ಜಂಟಿ ಆಶ್ರಯದಲ್ಲಿ ಶರತ್ (ಅನ್ನು) ಸ್ಮರಣಾರ್ಥ ರಕ್ತಧಾನ ಶಿಬಿರ ಹಾಗೂ ಉಚಿತ ಹೃದಯ ತಪಾಸಣಾ ಶಿಬಿರವು ಹೊಸಂಗಡಿ ಕನಿಲ ಶ್ರೀ ಭಗವತೀ ಅಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಿತು. ಶಿಬಿರವನ್ನು ಖ್ಯಾತ ಉದ್ಯಮಿ, ಧಾರ್ಮಿಕ, ಸಾಮಾಜಿಕ ಮುಂದಾಳು, ಕನಿಲ ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷರಾದ ಶ್ರೀ ವಿಶ್ವನಾಥ ಕುದುರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಒಮೆಗಾ ಆಸ್ಪತ್ರೆಯ ಸೀನಿಯರ್ ಕಾರ್ಡಿಯೋಲಜಿಸ್ಟ್ ಡಾ|| ಕೆ. ಮುಕುಂದ್, ಡಾ|| ಮೇಘನಾ ಮುಕುಂದ್,ಡಾ||ಅಮಿತ್ ಕಿರಣ್,ಡಾ||ವಿಜಯ ರಾವನ್ಕರ್, ಡಾ|| ಪ್ರಸೀದ ಹಾಗೂ ಸಾಮಾಜಿಕ ಕಾರ್ಯಕರ್ತ ಸಿದ್ದಿಕ್ ಮಂಜೇಶ್ವರ, ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತೀ ಸುಳ್ಯಮೆ, ಕನಿಲ ಭಗವತೀ ಅಂಗ್ಲ ಮಾಧ್ಯಮ ಶಾಲೆಯ ಮೆನೇಜರ್ ಮನೋಜ್ ಕುಮಾರ್, ಶರತ್ ಅವರ ತಂದೆ ರಾಘವ ರಾಮತ್ತ ಮಜಲ್, ಕೆ.ಎಫ್.ಸಿ ಕನಿಲ ಕ್ಲಬ್ ನ ಅಧ್ಯಕ್ಷರಾದ ಅನಿಲ್ ಕನಿಲ ಮೊದಲಾದವರು ಉಪಸ್ಥಿತರಿದ್ದರು.ಅದೇ ರೀತಿ ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ನ ಪದಾಧಿಕಾರಿಗಳು, ಹಾಗೂ ಇಂಡಿಯನ್ ಬ್ಲಡ್ ಡೋನರ್ಸ್ ಸೊಸೈಟಿಯ ಸದಸ್ಯರು, ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ|| ಅಮಿತ್ ಕಿರಣ್ ರನ್ನು ಮನೋಜ್ ಕುಮಾರ್ ಸನ್ಮಾನಿಸಿದರು. ಅದೇ ರೀತಿ ಡಾ||ವಿಜಯ ರಾವನ್ಕರ್ ರನ್ನು ಭಾರತೀ ಸುಳ್ಯಮೆ ಸನ್ಮಾನಿಸಿದರು. ಡಾ|| ಪ್ರಸೀದರವರನ್ನು ವಿಶ್ವನಾಥ್ ಕುದುರು ಸನ್ಮಾನಿಸಿದರು. ಸಾಮಾಜಿಕ ಕಾರ್ಯಕರ್ತ ಸಿದ್ದಿಕ್ ಮಂಜೇಶ್ವರ ಇವರನ್ನು ರಾಘವ ರಾಮತ್ತ ಮಜಲ್ ಸನ್ಮಾನಿಸಿದರು. ಕಮಲಾಕ್ಷ ಕನಿಲ ಸ್ವಾಗತಿಸಿ, ಪ್ರವೀಣ್ ಕನಿಲ ವಂದಿಸಿದರು.




