ಭಾರತೀಯ ಜನತಾ ಯುವ ಮೋರ್ಛಾ ಕುಂಬಳೆ ಪಂಚಾಯತ್ ನೂತನ ಸಮಿತಿ ಪದಾಧಿಕಾರಿಗಳ ಪದಗ್ರಹಣ.
ಆಗಸ್ಟ್ 22, 2023
0
ಭಾರತೀಯ ಜನತಾ ಯುವ ಮೋರ್ಛಾ ಕುಂಬಳೆ ಪಂಚಾಯತ್ ನೂತನ ಸಮಿತಿ ಪದಾಧಿಕಾರಿಗಳ ಪದಗ್ರಹಣ.
ಕುಂಬಳೆ: ಭಾರತೀಯ ಜನತಾ ಯುವಮೋರ್ಚಾ ಕುಂಬಳೆ ಪಂಚಾಯತ್ ನ ನೂತನ ಸಮಿತಿಯನ್ನು ಬಿಜೆಪಿ ಕುಂಬಳೆ ದಕ್ಷಿಣ ವಲಯ ಅಧ್ಯಕ್ಷರಾದ ಸುಜಿತ್ ರೈ ಹಾಗೂ ಉತ್ತರ ವಲಯ ಅಧ್ಯಕ್ಷರಾದ ಪ್ರದೀಪ್ ಆರಿಕ್ಕಾಡಿ ಜಂಟಿಯಾಗಿ ಘೋಷಣೆ ಮಾಡಿದರು. ನೂತನ ಸಮಿತಿಯ ಅಧ್ಯಕ್ಷರಾಗಿ ಅಜಿತ್ ಕುಮಾರ್ ವಿಷ್ಣು ನಗರ, ಹಾಗೂ ಪ್ರಧಾನ
ಕಾರ್ಯದರ್ಶಿಯಾಗಿ ಲಿಖಿತ್ ಆಳ್ವ ಬಂಬ್ರಾಣ ಆಯ್ಕೆಯಾದರು. ಸಮಿತಿಯ ಉಪಾಧ್ಯಕ್ಷರಾಗಿ ಅಭಿಲಾಶ್ ಪೆರಾಲ್, ವೆಂಕಟೇಶ ನಾರಾಯಣಮಂಗಲ, ಕಾರ್ಯದರ್ಶಿಗಳಾಗಿ ಧನರಾಜ್ ಕುಂಟಗೇರಡ್ಕ, ಶ್ರೀನಿವಾಸ ಹಾಗೂ ಸೋಶಿಯಲ್ ಮೀಡಿಯಾ ಇನ್ ಚಾರ್ಜ್ ಅಗಿ ಪ್ರಿತೇಶ್ ನಾರಾಯಣಮಂಗಲ ಆಯ್ಕೆಯಾದರು. ಬಳಿಕ ನೂತನ ಸಮಿತಿಯ ಸದಸ್ಯರಿಗೆ ಶಾಲು ಹಾಕಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷರಾದ ಸುನಿಲ್ ಅನಂತಪುರ, ಉಪಾಧ್ಯಕ್ಷರಾದ ಕೆ ರಮೇಶ ಭಟ್, ಯುವಮೋರ್ಚಾ ಕುಂಬಳೆ ಮಂಡಲ ಅಧ್ಯಕ್ಷರಾದ ಅವಿನಾಶ್ ಕಾರಂತ, ಪಂಚಾಯತ್ ಸದಸ್ಯರಾದ ಪುಷ್ಪಲತಾ .ಪಿ ಶೆಟ್ಟಿ, ಅಜಯ. ಎಂ ಹಾಗೂ ಕುಂಬಳೆ ದಕ್ಷಿಣ ವಲಯ ಸಮಿತಿಯ ಸದಸ್ಯರಾದ ವರುಣಕುಮಾರ ಕುಂಟಗೇರಡ್ಕ ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯರಾದ ಪ್ರೇಮಾವತಿ ಸ್ವಾಗತಿಸಿ, ವಿದ್ಯಾ ಏನ್ ಪೈ ವಂದಿಸಿದರು.


