Breaking Posts

6/trending/recent
Type Here to Get Search Results !

8:10:45

ನಕಾರಾತ್ಮಕತೆ ಮೀರಿ ಬೆಳೆಯುವವರೇ ನೈಜ ಸಾಧಕರು - ಕಾಸರಗೋಡು ಚಿನ್ನಾ.

ನಕಾರಾತ್ಮಕತೆ ಮೀರಿ ಬೆಳೆಯುವವರೇ ನೈಜ ಸಾಧಕರು.- ಕಾಸರಗೋಡು ಚಿನ್ನಾ.
ಕಾಸರಗೋಡು: ಹೊಸ ಬಟ್ಟೆ ಉಟ್ಟಾಗ ಗುರುತಿಸದ ಜನ ಅದೇ ಬಟ್ಟೆಯಲ್ಲಿ ಕಪ್ಪು ಚುಕ್ಕೆ ಕಂಡಾಗ ತಕ್ಷಣ ಗುರುತಿಸುತ್ತಾರೆ. ಸಕಾರಾತ್ಮಕ ವಿಚಾರಕ್ಕಿಂತ ನಕಾರಾತ್ಮತೆಯ ಕಡೆ ಗಮನ ನೀಡುತ್ತಾರೆ. ಆದರೆ ಸಾಧಕರು ಇಂತಹ ಋಣಾತ್ಮಕ ಅಂಶಗಳನ್ನು ಮೀರಿ ಬೆಳೆಯುತ್ತಾರೆ ಎಂದು ಹಿರಿಯ ರಂಗ ನಿರ್ದೇಶಕ ಕಾಸರಗೋಡು ಚಿನ್ನ ಅಭಿಪ್ರಾಯಪಟ್ಟರು. ಅವರು ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗ ಮತ್ತು ಕಾಸರಗೋಡು ಕನ್ನಡ ಬಳಗ ಆಯೋಜಿಸಿದ್ದ ಸ್ಮೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಅಗಲಿದ ಅಧ್ಯಾಪಕರ ಕುರಿತು ಸ್ಮೃತಿ ಉಪನ್ಯಾಸ ಮಾಡಿದರು. ಕಾಸರಗೋಡು ಚಿನ್ನಾ ಅವರು ತಮ್ಮ ಗುರುಗಳಾದ ಪ್ರೊ. ಪಿ. ಸುಬ್ರಾಯ ಭಟ್, ಪ್ರೊ. ಬಿ. ಕೆ ತಿಮ್ಮಪ್ಪ, ಪ್ರೊ. ಬಿ. ಪದ್ಮನಾಭ, ಪ್ರೊ. ವೇಣುಗೋಪಾಲ ಕಾಸರಗೋಡು ಮತ್ತು ಕಿರಿಯರಾದ ಪ್ರೊ. ದಿನೇಶ್ ಕುಮಾರ್ ಅವರ ಬದುಕಿನ ಪುಟಗಳ ಕಡೆಗೆ ಬೆಳಕು ಚೆಲ್ಲಿದರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗ ಸಕಾರಾತ್ಮಕ ಚಿಂತನೆಯ ಗುರುಗಳನ್ನು ನಾಡಿಗೆ ನೀಡಿದೆ. ಈ ಗುರುಗಳು ತಮ್ಮ ಸಾಹಿತ್ಯಕ, ಸಾಂಸ್ಕೃತಿಕ, ಸಾಮಾಜಿಕ ಮಾರ್ಗದರ್ಶನದ ಮೂಲಕ ತಮ್ಮ ವಿದ್ಯಾರ್ಥಿಗಳನ್ನು ಬೆಳೆಸಿದ್ದಾರೆ ಎಂದು ನುಡಿದರು. ನಂತರ ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ರಾಜನೀತಿಯ ಪರಿಭಾಷೆ ಕುರಿತು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ದ ಪರೀಕ್ಷಾಂಗ ಕುಲಸಚಿವ ಡಾ. ಎಚ್. ಜಿ. ಶ್ರೀಧರ ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ. ಅನಂತಪದ್ಮನಾಭ ಎ. ಎಲ್. ಉದ್ಘಾಟಿಸಿದರು. ವಿಭಾಗ ಮುಖ್ಯಸ್ಥೆ ಪ್ರೊ. ಸುಜಾತ ಅಧ್ಯಕ್ಷತೆ ವಹಿಸಿದರು. ಇದೇ ಸಂದರ್ಭದಲ್ಲಿ ದತ್ತಿನಿಧಿಯ ವಿತರಣೆ ನಡೆಯಿತು. ವಿದ್ಯಾರ್ಥಿನಿ ಜ್ಯೋತಿಕಾ ಪ್ರಾರ್ಥನೆ ಹಾಡಿದರು. ಡಾ. ರತ್ನಾಕರ ಮಲ್ಲಮೂಲೆ ಸ್ವಾಗತಿಸಿದರು. ಡಾ. ಆಶಾಲತಾ ಸಿಕೆ ವಂದಿಸಿದರು. ಡಾ. ಬಾಲಕೃಷ್ಣ ಬಿ.ಎಂ. ಹೊಸಂಗಡಿ ಕಾರ್ಯಕ್ರಮ ನಿರ್ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.