Breaking Posts

6/trending/recent
Type Here to Get Search Results !

8:10:45

ಮೀಂಜ ಗ್ರಾಮ ಪಂಚಾಯತ್ ಕೃಷಿ ಭವನದಲ್ಲಿ ಕೃಷಿಕರ ದಿನಾಚರಣೆ. ಪ್ರಗತಿಪರ ಕೃಷಿಕರಿಗೆ ಸನ್ಮಾನ.

ಮೀಂಜ ಗ್ರಾಮ ಪಂಚಾಯತ್ ಕೃಷಿ ಭವನದಲ್ಲಿ ಕೃಷಿಕರ ದಿನಾಚರಣೆ. ಪ್ರಗತಿಪರ ಕೃಷಿಕರಿಗೆ ಸನ್ಮಾನ.
ಮೀಯಪದವು: ಮೀಂಜ ಪಂಚಾಯತ್ ಕೃಷಿ ಭವನ ಹಾಗೂ ಪಾಡಶೇಖರ ಸಮಿತಿಯ ಜಂಟಿ ನೇತೃತ್ವದಲ್ಲಿ ಕೃಷಿಕರ ದಿನಾಚರಣೆ ಆಚರಿಸಲಾಯಿತು. ಪ್ರತಿ ವರ್ಷ ಸಿಂಹ ಮಾಸದ ಒಂದನೇ ತಾರೀಖಿನಂದು ಕೇರಳದಲ್ಲಿ ಕೃಷಿಕರ ದಿನವನ್ನಾಗಿ ಆಚರಿಸಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು
ಈ ಸಂದರ್ಭದಲ್ಲಿ ಆಯ್ದ ಕೃಷಿಕರು ಮತ್ತು ಕೃಷಿ ಕಾರ್ಮಿಕರನ್ನು ಸನ್ಮಾನಿಸಲಾಯಿತು ಪಂಚಾಯತ್ ಹಾಲ್ ನಲ್ಲಿ ಜರಗಿದ ಕಾರ್ಯಕ್ರಮವನ್ನು ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿದರು,
ಉಪಾಧ್ಯಕ್ಷ ಜಯರಾಮ ಬಲ್ಲಂಗುಡೆಲ್ ಅಧ್ಯಕ್ಷತೆ ವಹಿಸಿದರು ಬ್ಲಾಕ್ ಪಂಚಾಯತ್ ಉಪಾಧ್ಯಕ್ಷರಾದ ಮೊಹಮ್ಮದ್ ಹನೀಫ್, ಜಿಲ್ಲಾ ಪಂಚಾಯತ್ ಸದಸ್ಯ ಕಮಲಾಕ್ಷ, ಬ್ಲಾಕ್ ಪಂಚಾಯತ್ ಸದಸ್ಯೆ ಅಶ್ವಿನಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರುಕಿಯಾ ಸಿದ್ದಿಕ್, ಸರಸ್ವತಿ, ಬಾಬು ಕುಲೂರು, ಪಂಚಾಯತ್ ಸದಸ್ಯರು ಹಾಗೂ ಕೃಷಿ ಅಭಿವೃದ್ಧಿ ಹಿರಿಯ ಸದಸ್ಯರಾದ ಎಂ ಸಂಜೀವ ಶೆಟ್ಟಿ ಬೆಜ್ಜ ಪಾಡಶೇಖರ ಸಮಿತಿ ಸದಸ್ಯರು ಹಾಗೂ ಕೃಷಿಕರು ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಸ್ವಾಗತಿಸಿದರು ಸಿಬ್ಬಂದಿ ವರ್ಗ ಕಾರ್ಯಕ್ರಮವನ್ನು ನಿರೂಪಿಸಿದರು. ಪಂಚಾಯತ್ ಕಾರ್ಯದರ್ಶಿ ಯಸ್. ವಿ ಸುರೇಶ್ ಧನ್ಯವಾದ ನೆರವೇರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.