ಮಂಜೇಶ್ವರ ಶ್ರೀ ಗಣೇಶೋತ್ಸವ ಪೂರ್ವಭಾವಿ ಮಹಿಳಾ ಸಮಿತಿ ಸಭೆ. ನೂತನ ಪದಾಧಿಕಾರಿಗಳ ಪದಗ್ರಹಣ.
ಆಗಸ್ಟ್ 14, 2023
0
ಮಂಜೇಶ್ವರ ಶ್ರೀ ಗಣೇಶೋತ್ಸವ ಪೂರ್ವಭಾವಿ ಮಹಿಳಾ ಸಮಿತಿ ಸಭೆ. ನೂತನ ಪದಾಧಿಕಾರಿಗಳ ಪದಗ್ರಹಣ.
ಮಂಜೇಶ್ವರ: ಶ್ರೀ ಅಯ್ಯಪ್ಪ ಮಹಿಳಾ ಸಮಿತಿ ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ ಇದರ ವಾರ್ಷಿಕ ಮಹಾಸಭೆಯು ಹೊಸಂಗಡಿ ಪ್ರೇರಣ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಶ್ರೀ ಅಯ್ಯಪ್ಪ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಪದ್ಮನಾಭ ಕಡಪರ, ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ನ್ಯಾಯವಾದಿ ನವೀನ್ ರಾಜ್, ಕಾರ್ಯದರ್ಶಿ ಅವಿನಾಶ್ ಹೆಗ್ಡೆ, ಕೋಶಾಧಿಕಾರಿ ಚಿದಾನಂದ ಆಚಾರ್ಯ, ಮುಂತಾದವರು ಮಾತನಾಡಿದರು, ಮಹಿಳಾ ಸಮಿತಿ ಅಧ್ಯಕ್ಷರಾದ ಚಂಚಲಾಕ್ಷಿ ಪದ್ಮನಾಭ ಕಡಪರ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು. 43 ನೇ ಮಂಜೇಶ್ವರ ಗಣೇಶೋತ್ಸವ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಸೆಪ್ಟೆಂಬರ್ 19 ರಿಂದ 22 ರ ವರೆಗೆ ನಡೆಯಲಿರುವುದು, ಇದರ ಪೂರ್ವಭಾವಿ ತಯಾರಿ ಬಗ್ಗೆ ಚರ್ಚಿಸಲಾಯಿತು. ನಂತರ ಶ್ರೀ ಅಯ್ಯಪ್ಪ ಮಹಿಳಾ ಸಮಿತಿಯ ನೂತನ ಸಮಿತಿಯ ರಚನೆ ನಡೆಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ರಜಿನಿ ಶ್ರೀಧರ್, ಕಾರ್ಯದರ್ಶಿಯಾಗಿ ಅನುಪಮಾ ನವೀನ್ ರಾಜ್, ಕೋಶಾಧಿಕಾರಿಯಾಗಿ ವಿಜಯಶ್ರೀ ವಿನೀತ್, ಉಪಾಧ್ಯಕ್ಷರುಗಳಾಗಿ ಚೈತ್ರ ದೇವರಾಜ್, ಸುಜಾತ ನಾರಾಯಣ, ಜೊತೆ ಕಾರ್ಯದರ್ಶಿಗಳಾಗಿ ಮಂಜೂರಾಜೇಂದ್ರ, ಸುಜಾತ ಸೀತಾರಾಮ್ ಆಯ್ಕೆಯಾದರು, ಜಯಲಕ್ಷ್ಮಿ ಕೃಷ್ಣ ಜಿ. ಮಂಜೇಶ್ವರ್, ಚಂಚಲಾಕ್ಷಿ ಕಡಪರ, ವೀಣಾ ಚಂದ್ರಹಾಸ, ಮಿನಿ ಮೊಲ್, ಪುಷ್ಪ, ಆಶಲತಾ ಬಿ.ಎಂ, ಶ್ರೀಲತಾ ಮುಂತಾದವರು ಸಮಿತಿ ಸದಸ್ಯರಾಗಿ ಆಯ್ಕೆಯಾದರು, ಕಾರ್ಯಕ್ರಮದಲ್ಲಿ ಜಯಲಕ್ಷ್ಮಿ ಕೃಷ್ಣರವರು ಸ್ವಾಗತಿಸಿ ವಂದಿಸಿದರು.

