ಕೇರಳ ಕೋ - ಆಪರೇಟಿವ್ ಎಂಪ್ಲಾಯೀಸ್ ಯೂನಿಯನ್ ಸಿ.ಐ.ಟಿ.ಯು ಮಂಜೇಶ್ವರ ಯೂನಿಟ್ ಸಮ್ಮೇಳನ.
ಆಗಸ್ಟ್ 10, 2023
0
ಕೇರಳ ಕೋ - ಆಪರೇಟಿವ್ ಎಂಪ್ಲಾಯೀಸ್ ಯೂನಿಯನ್ ಸಿ.ಐ.ಟಿ.ಯು ಮಂಜೇಶ್ವರ ಯೂನಿಟ್ ಸಮ್ಮೇಳನ.
ಮಂಜೇಶ್ವರ: ಕೇರಳ ಕೋ-ಓಪರೇಟಿವ್ ಎಂಪ್ಲೋಯಿಸ್ ಯೂನಿಯನ್ (CITU) ಮಂಜೇಶ್ವರ ಯೂನಿಟ್ ಸಮ್ಮೇಳನವು ಹೊಸಂಗಡಿ ಎ.ಕೆ.ಜಿ ಮಂದಿರದಲ್ಲಿ ನಡೆಯಿತು. ರೂಪೀಕರಣ ಸಮ್ಮೇಳನವನ್ನು K.C.E.U ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯ ಹಾಗೂ ಅಂಗಡಿಮುಗೇರು ಸೇವಾ ಸಹಕಾರಿ ಬ್ಯಾಂಕಿನ ಕಾರ್ಯದರ್ಶಿಯಾದ ವಿಠಲ್ ರೈ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕೇರಳ ದಿನೇಶ್ ಬೀಡಿ ಸಹಕಾರಿ ಸಂಘದ ಕಾರ್ಯದರ್ಶಿ ಉಷಾ ವಹಿಸಿದರು. ಸಮ್ಮೇಳನದಲ್ಲಿ ಸಿಪಿಐ(ಎಂ) ಲೋಕಲ್ ಕಾರ್ಯದರ್ಶಿ ಕರುಣಾಕರ ಶೆಟ್ಟಿ, KCEU ಏರಿಯಾ ಕಾರ್ಯದರ್ಶಿ ಸತೀಶ್ ಏಲಿಯಾಣ, KCEU ಏರಿಯಾ ಸಮಿತಿ ಸದಸ್ಯರಾದ ಕಮಲಾಕ್ಷ ಕನಿಲ, ಮನೋಹರ ಆರ್.ವಿ.ಎಚ್, DYFI ವಿಲೇಜ್ ಕಾರ್ಯದರ್ಶಿ ಎಂ.ಕೆ ಆಶೀರ್ ಮೊದಲಾದವರು ಉಪಸ್ಥಿತರಿದ್ದರು. ಚರ್ಚೆಯಲ್ಲಿ ಸೌಮ್ಯ ಶೆಟ್ಟಿ ಹಾಗೂ ಚಿತ್ರ ಶೆಟ್ಟಿ ಭಾಗವಹಿಸಿದರು. KCEU ಮಂಜೇಶ್ವರ ಯೂನಿಟಿನ ನೂತನ ಕಾರ್ಯದರ್ಶಿಯಾಗಿ ಅಶ್ರಫ್ ಗುಡ್ಡೆಕ್ಕೇರಿ, ಅಧ್ಯಕ್ಷೆಯಾಗಿ ಸಮೀನ, ಉಪಾಧ್ಯಕ್ಷರಾಗಿ ಉಷಾ, ಜೊತೆ ಕಾರ್ಯದರ್ಶಿಯಾಗಿ ವೇಣು ಗೋಪಾಲ, ಖಜಾಂಜಿಯಾಗಿ ಶ್ರುತಿ ಪ್ರಶಾಂತ್ 11 ಮಂದಿ ಒಳಗೊಂಡ ಯೂನಿಟ್ ಸಮಿತಿ ರೂಪೀಕರಿಸಲಾಯಿತು. ಕಮಲಾಕ್ಷ ಕನಿಲ ಸ್ವಾಗತಿಸಿ, ಅಶ್ರಫ್ ಗುಡ್ಡೆಕ್ಕೇರಿ ವಂದಿಸಿದರು.


