Breaking Posts

6/trending/recent
Type Here to Get Search Results !

8:10:45

ಚಕ್ರವರ್ತಿ (ರಿ.) ಹೊಸಂಗಡಿ ವತಿಯಿಂದ 76 ನೇ ಸ್ವಾತಂತ್ರೋತ್ಸವ ಅರ್ಥಪೂರ್ಣವಾಗಿ ಆಚರಣೆ. ಆಸಕ್ತ 5 ಬಡ ಕುಟುಂಬಗಳಿಗೆ ಕಿಟ್ ವಿತರಣೆ. ಮಕ್ಕಳಿಗೆ ಪುಸ್ತಕ ಪರಿಕರಗಳ ವಿತರಣೆ. ಹಿರಿಯ ಸಾಧಕರಿಗೆ ಸನ್ಮಾನ.

ಚಕ್ರವರ್ತಿ (ರಿ.) ಹೊಸಂಗಡಿ ವತಿಯಿಂದ 76 ನೇ ಸ್ವಾತಂತ್ರೋತ್ಸವ ಅರ್ಥಪೂರ್ಣವಾಗಿ ಆಚರಣೆ. ಆಸಕ್ತ 5 ಬಡ ಕುಟುಂಬಗಳಿಗೆ ಕಿಟ್ ವಿತರಣೆ. ಮಕ್ಕಳಿಗೆ ಪುಸ್ತಕ ಪರಿಕರಗಳ ವಿತರಣೆ. ಹಿರಿಯ ಸಾಧಕರಿಗೆ ಸನ್ಮಾನ.
ಮಂಜೇಶ್ವರ: ಚಕ್ರವರ್ತಿ (ರಿ.) ಹೊಸಂಗಡಿ ಇದರ ವತಿಯಿಂದ ದೇಶದ 76 ನೇ ಸ್ವಾತಂತ್ರೋತ್ಸವದಂಗವಾಗಿ ನಿವೃತ್ತ ಲೆಕ್ಕ ಪರಿಶೋಧಕರಾದ ನಾರಾಯಣ ಬಿ.ಎಮ್ ಧ್ವಜಾರೋಹಣಗೈದರು.
ಸಂಸ್ಥೆಯ ಅಧ್ಯಕ್ಷರಾದ ಶಿವ ಪ್ರಸಾದ್ ಪೆಲಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಸಂಸ್ಥೆಯ ಫೋಷಕರಾದ ಮಾಧವ ಸಂಗಮ್, ಸಂಕಬೈಲ್ ಸತೀಶ್ ಅಡಪ, ಯಾದವ ಎ.ಎಸ್, ಕನಿಲ ಶ್ರೀ ಭಗವತೀ ಕ್ಷೇತ್ರದ ಗುರಿಕಾರರಾದ ಪುರುಷೋತ್ತಮ ಗುರಿಕಾರ, ಪ್ರಕಾಶ್ ಗುರಿಕಾರ, ಕೋಶಾಧಿಕಾರಿ: ವಿಜಯ ಕನಿಲ, ಬಲ್ಲಂಗುಡೇಲು ಶ್ರೀ ಪಾಡಾoಗರೆ ಭಗವತೀ ಕ್ಷೇತ್ರದ ಗುರಿಕಾರರಾದ: ತಾರನಾಥ ಗುರಿಕಾರ, ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ: ನ್ಯಾ. ನವೀನ್ ರಾಜ್ ಕೆ.ಜೆ, ಕೋಶಾಧಿಕಾರಿ: ಚಿನ್ಮಯಾನಂದ ಆಚಾರ್ಯ, ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷರಾದ: ಪದ್ಮನಾಭ ಕಡಪ್ಪರ, ವೈದ್ಯರಾದ ಶೇರಿಫ್ ಹೊಸಂಗಡಿ, ಮಿಂಜ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಆಶಲತಾ ಪೆಲಪ್ಪಾಡಿ, ಶ್ರೀ ಅಯ್ಯಪ್ಪ ಕ್ಷೇತ್ರದ ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ರಜನಿ ಶ್ರೀಧರ್, ಕಾರ್ಯದರ್ಶಿ ಶ್ರೀಮತಿ ಅನುಪಮ ನವೀನ್ ರಾಜ್, ಸಂಸ್ಥೆಯ ಗೌರವಾಧ್ಯಕ್ಷರಾದ ಅನಿಲ್ ರಾಜ್ ಅಂಗಡಿಪದವು ಶುಭಾಸಂಶನೆಗೈದರು.
ಈ ವೇಳೆ C.A ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಕು.ವೃಂದಾ ಸಿ.ಪಿ ಮತ್ತು
ಹೊಸಂಗಡಿಯ ವೈದ್ಯೆ ಡಾ. ಶೇರೀಫ್,
ಹಿರಿಯ ನಾಗರಿಕರಾದ ಮಾಧವ ಮಿತ್ತಕನಿಲ ಇವರನ್ನು ಸನ್ಮಾನಿಸಲಾಯಿತು. ಹಾಗೂ ಸಂಕಷ್ಟ ಜೀವನ ನಡೆಸುವ 5 ಕುಟುಂಬಗಳಿಗೆ ನಿತ್ಯೋಪಯೋಗಿ ಆಹಾರ ವಸ್ತುಗಳ ಕಿಟ್ ವಿತರಣೆ, ಮತ್ತು ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಕಲಿಕೋಪಕರಣವನ್ನು ನೀಡಲಾಯಿತು.
ಈ ವೇಳೆ ಹೊಸಂಗಡಿ ರೈಲ್ವೆ ಗೇಟ್ ಸಮೀಪ ಸುಪ್ರೀಂ ತಿರುವಿನಲ್ಲಿ ರಸ್ತೆಯಲ್ಲಿ ತೆರಳುವ ವಾಹನಗಳಿಗೆ ಅನುಕೂಲವಾಗಲು ಕಾನ್ವೆಕ್ಸ್ ಕನ್ನಡಿ ಅಳವಡಿಸಲಾಯಿತು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುರೇಶ್ ಗಾನಿಂಜಾಲ್ ಸ್ವಾಗತಿಸಿ, ಧಾರ್ಮಿಕ ಮುಂದಾಳು ದಿನಕರ್ ಬಿ.ಎಮ್ ನಿರೂಪಿಸಿ, ಸಂಸ್ಥೆಯ ಉಪಾಧ್ಯಕ್ಷ: ರತನ್ ಕುಮಾರ್ ಹೊಸಂಗಡಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.