ಸಿರಿಬಾಗಿಲು ಪ್ರತಿಷ್ಠಾನ - ರಾಮಾಯಣ ಮಾಸಾಚರಣೆ ಸಪ್ತಾಹ ಸಮಾರೋಪ ಸಮಾರಂಭ.
ಆಗಸ್ಟ್ 18, 2023
0
ಸಿರಿಬಾಗಿಲು ಪ್ರತಿಷ್ಠಾನ - ರಾಮಾಯಣ ಮಾಸಾಚರಣೆ ಸಪ್ತಾಹ ಸಮಾರೋಪ ಸಮಾರಂಭ.
ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ರಾಮಾಯಣ ಮಾಸಾಚರಣೆ ಪ್ರಯುಕ್ತ ನಡೆದ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು. ಸತತ ಒಂದು ವಾರದಿಂದ ರಾಮಾಯಣ ಕುರಿತಾದ ಪ್ರಸಂಗದ ಯಕ್ಷಗಾನ ತಾಳಮದ್ದಳೆ, ಭಜನೆ, ಪ್ರವಚನ ನಡೆದಿದ್ದು, ಸಮಾರೋಪ ಸಮಾರಂಭದ ಉಧ್ಘಾಟನೆಯನ್ನು ಶ್ರೀ ಪ್ರಭಾಕರ ಡಿ.ಸುವರ್ಣ, ದುಬೈ, ಸುವರ್ಣ ಪ್ರತಿಷ್ಠಾನ ಕರ್ನಿರೆಯವರು ದೀಪಪ್ರಜ್ವಲನೆಗೈದು ಉದ್ಘಾಟಿಸಿದರು. ರಂಗಪ್ಪಯ್ಯ ಹೊಳ್ಳರವರು ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಪ್ರಗತಿಪರ ಕೃಷಿಕರಾದ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿರವರು ಮಾತನಾಡಿ ಕರಾವಳಿಯ ಗಂಡುಕಲೆ ಯಕ್ಷಗಾನ, ಯಕ್ಷಗಾನದಿಂದಾಗಿ ಸಮಾಜದ ಜನರಲ್ಲಿ ಸಂಸ್ಕೃತಿ ಕುರಿತು ಜಾಗೃತಿ ಬಂದಿದೆ. ಪುರಾಣಗಳ ಕಥೆಗಳ ಪರಿಚಯ - ಶ್ರೀರಾಮನ ಆದರ್ಶ ಗುಣಗಳು ಜನಮನ ಮುಟ್ಟುವಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯಗತ್ಯವೆಂದು ತಿಳಿಸಿದರು.
ಹೊಗಳಿಕೆ - ತೆಗಳಿಕೆಗಳಿಗೆ ಹಿಗ್ಗದೆ - ಕುಗ್ಗದೆ ಛಲದಿಂದ ಪ್ರಯತ್ನಿಸಿದರೆ ಯಾವುದೂ ಸಾಧ್ಯ, ಯಾಕೆಂದರೆ ಒಂದು ಮಲೆಯಾಳೀಕರಣದ ಪ್ರಭಾವ ಬೀರುವ ಕಾಸರಗೋಡಿನಲ್ಲಿ ಪೂರ್ವಿಕರು ಬೆಳೆಸಿದ ಯಕ್ಷಗಾನ - ಮುಂದಿನ ತಲೆಮಾರಿಗೆ ಪರಿಚಯಿಸುವ ದೂರದೃಷ್ಠಿಯಿಂದ ನಿರ್ಮಾಣವಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ - ರೂವಾರಿ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅಭಿನಂದನಾರ್ಹರು ಎಂದರು. ಬಾರ್ಕೂರಿನ ಶ್ರೀ ದಾಮೋದರ ಶರ್ಮರವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಕರಾವಳಿಯ ಜನತೆಗೆ ದೇಶದಾದ್ಯಂತ ಹೆಚ್ಚಿನ ಗೌರವವಿದೆ. ಕಾರಣ ಹಿರಿಯರು ನಮಗೆ ನೀಡಿದ ಸಂಸ್ಕಾರದ ಪರಿಣಾಮ. ಕೀರ್ತಿಶೇಷರನ್ನು ನೆನಪಿಸುವ ಕಾರ್ಯ ಸಿರಿಬಾಗಿಲು ಪ್ರತಿಷ್ಠಾನ ಮಾಡುತ್ತಿದೆ. ಸಾಂಸ್ಕೃತಿಕ ಭವನದಲ್ಲಿ 250 ಕ್ಕೂ ಹೆಚ್ಚು ಕೀರ್ತಿಶೇಷರ ಭಾವಚಿತ್ರ ನೊಡಿದಾಗ ನಮಗೆಲ್ಲಾ ಹೆಮ್ಮೆ ಎನಿಸುತ್ತದೆ ಎಂದರು. ಬೆಂಗಳೂರಿನ ಉದ್ಯಮಿ ಲಕ್ಮೀನಾರಯಣ ಐವರ್ನಾಡು, ಬ್ರಹ್ಮಶ್ರೀ ಕೃಷ್ಣರಾಜ ತಂತ್ರಿ ಕುಡುಪು ಆಶೀರ್ವಾದಿಸಿದರು. ಶ್ರೀ ಕೆ.ಆರ್. ಆಳ್ವ ಕಂಬಾರು ಶ್ರೀ ಶೀನಶೆಟ್ಟಿ ಕಜೆ ಅಧ್ಯಕ್ಷರು ಆಡಳಿತ ಸಮಿತಿ ಪುಳ್ಕೂರು ಉಪಸ್ಥಿತರಿದ್ದರು.
ಇದಕ್ಕೆ ಮೊದಲು ಪ್ರಸಿದ್ದ ಕಲಾವಿದರಿಂದ ಪುತ್ತಿಗೆ ರಾಮಕೃಷ್ಣ ಜೊಯಿಸ ವಿರಚಿತ ಶ್ರೀರಾಮ ನಿಜಪಟ್ಟಾಭಿಷೇಕ ಯಕ್ಷಗಾನ ತಾಳಮದ್ದಳೆ ನಡೆಯಿತು. ಸಿರಿಬಾಗಿಲು ರಾಮಕೃಷ್ಣ ಮಯ್ಯ, ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ, ಸತ್ಯನಾರಾಯಣ ಪುಣ್ಚಿತ್ತಾಯ ಪೆರ್ಲ, ಮುರಾರಿ ಕಡಂಬಳಿತ್ತಾಯ, ಲವಕುಮಾರ್ ಐಲ ಹಿಮ್ಮೇಳದಲ್ಲಿ ಸಹಕರಿಸಿದರೆ, ರಾಮನಾಗಿ ರಾದಾಕೃಷ್ಮ ಕಲ್ಚಾರ್, ಸೀತೆ ಯಾಗಿ ವಿಜಯಶಂಕರ ಆಳ್ವ, ಹನುಮಂತ ನಾಗಿ ಸುಬ್ರಾಯ ಹೊಳ್ಳ ಕಾಸರಗೋಡು, ಈಶ್ವರ ನಾಗಿ ನಾಗರಾಜ ಪದಕಣ್ಣಾಯ ಸಹಕರಿಸಿದರು.
ಶ್ರೀ ಮಹಾದೇವ ಭಜನಾ ಸಂಘ ಪುಳ್ಕೂರು ಸಿರಿಬಾಗಿಲು ಇವರ ಭಜನೆ, ಹಾಗು ಯೋಗಾಚಾರ್ಯ ಶ್ರೀ ಪುಂಡರೀಕಾಕ್ಷ ಬೆಳ್ಳೂರು ಇವರಿಂದ ಪ್ರವಚನ ನಡೆಯಿತು. ಪ್ರತಿಷ್ಠಾನದ ವತಿಯಿಂದ ಪ್ರವಚನಕಾರರಾದ ಶ್ರೀ ಪುಂಡರೀಕಾಕ್ಷ ಬೆಳ್ಳೂರು, ಯೋಗಾಚಾರ್ಯರನ್ನು ಗೌರವಿಸಲಾಯಿತು.
ಶ್ರೀ ಮೋಹನದಾಸ ಶೆಟ್ಟಿ ಸಿರಿಬಾಗಿಲು ನಿರೂಪಿಸಿದರೆ, ಶ್ರೀ ಜಗದೀಶ ಕೆ.ಕೂಡ್ಲು ವಂದಿಸಿದರು. ಗಡಿನಾಡು ಕಾಸರಗೋಡಿನ ಸಿರಿಬಾಗಿಲಿನ ಜನತೆಗೆ ಇದೊಂದು ಅವಿಸ್ಮರಣೀಯ ಕಾರ್ಯಕ್ರಮವಾಗಿ ಮೂಡಿ ಬಂತು.




