ಕನಿಲ ಶ್ರೀ ಭಗವತೀ ಕ್ಷೇತ್ರಕ್ಕೆ ಜಗತ್ಪ್ರಸಿದ್ಧ ಖ್ಯಾತ ವಾಸ್ತು ತಜ್ಞರೂ, ಶಿಲ್ಪಿಗಳಾದ ದಕ್ಷಿಣಾಮೂರ್ತಿ ಭೇಟಿ.
ಆಗಸ್ಟ್ 10, 2023
0
ಕನಿಲ ಶ್ರೀ ಭಗವತೀ ಕ್ಷೇತ್ರಕ್ಕೆ ಜಗತ್ಪ್ರಸಿದ್ಧ ಖ್ಯಾತ ವಾಸ್ತು ತಜ್ಞರೂ, ಶಿಲ್ಪಿಗಳಾದ ದಕ್ಷಿಣಾಮೂರ್ತಿ ಭೇಟಿ.
ಮಂಜೇಶ್ವರ: ಕನಿಲ ಶ್ರೀ ಭಗವತಿ ಕ್ಷೇತ್ರಕ್ಕೆ ಜಗತ್ ಪ್ರಸಿದ್ದ ಖ್ಯಾತ ವಾಸ್ತು ತಜ್ಞರು ಶಿಲ್ಪಿಗಳಾದ ದಕ್ಷಿಣಾ ಮೂರ್ತಿರವರು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕಾಗಿ ನೀಲಿ ನಕಾಶೆಯನ್ನು ತಯಾರು ಮಾಡಲಿರುವರು. ಈ ಸಂದರ್ಭದಲ್ಲಿ ಶಿಲ್ಪಿ ಕುಂಞರಾಮನ್ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಕಡಪ್ಪರ, ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ. ನವೀನ್ ರಾಜ್, ಕೋಶಾಧಿಕಾರಿ ಲಕ್ಷ್ಮಣ್ ಸಾಲಿಯಾನ್, ಕ್ಷೇತ್ರದ ಅಧ್ಯಕ್ಷ ವಿಶ್ವನಾಥ ಕುದುರು , ಪ್ರಧಾನ ಕಾರ್ಯದರ್ಶಿ ದೇವದಾಸ್, ಕೋಶಾಧಿಕಾರಿ ವಿಜಯ ಕನಿಲ, ಹಾಗೂ ಕ್ಷೇತ್ರದ ಆಚಾರ ಪಟ್ಟವರು ಹಾಗೂ ಗುರಿಕಾರರು, ಸಮಿತಿ ಸದಸ್ಯರು ಉಪಸ್ಥಿತರಿದ್ದರು.



