"ಅಮಾಯಕ ಸೌಜನ್ಯ ಸಾವಿನ ಪ್ರಕರಣದಲ್ಲಿ ನ್ಯಾಯ ಸಿಗಲಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲಿನ ಸುಳ್ಳು ಆರೋಪ ಕೊನೆಗೊಳ್ಳಲಿ, ಪೂಜಕಾವಂದರೊಂದಿಗೆ ನಾವಿದ್ದೇವೆ" ಎಂಬ ಘೋಷಣೆಯೊಂದಿಗೆ ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತ ವೃಂದದ ನೇತೃತ್ವದೊಂದಿಗೆ ಉಜಿರೆಯಲ್ಲಿ ಬೃಹತ್ ಪ್ರತಿಭಟನೆ ಹಾಗೂ ಸಮಾವೇಶ.
ಆಗಸ್ಟ್ 04, 2023
0
"ಅಮಾಯಕ ಸೌಜನ್ಯ ಸಾವಿನ ಪ್ರಕರಣದಲ್ಲಿ ನ್ಯಾಯ ಸಿಗಲಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲಿನ ಸುಳ್ಳು ಆರೋಪ ಕೊನೆಗೊಳ್ಳಲಿ, ಪೂಜಕಾವಂದರೊಂದಿಗೆ ನಾವಿದ್ದೇವೆ" ಎಂಬ ಘೋಷಣೆಯೊಂದಿಗೆ ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತ ವೃಂದದ ನೇತೃತ್ವದೊಂದಿಗೆ ಉಜಿರೆಯಲ್ಲಿ ಬೃಹತ್ ಪ್ರತಿಭಟನೆ ಹಾಗೂ ಸಮಾವೇಶ.
ಉಜಿರೆ/ಬೆಳ್ತಂಗಡಿ ನೇರ ವರದಿ: ಅಮಾಯಕ ಸೌಜನ್ಯ ಸಾವಿನ ಪ್ರಕರಣದಲ್ಲಿ ನ್ಯಾಯ ಸಿಗಲೀ, ಶ್ರೀ ಕ್ಷೇತ್ರದ ಮೇಲಿನ ಸುಳ್ಳು ಆರೋಪ ಕೊನೆಗೊಳ್ಳಲ್ಲಿ, ಪೂಜ್ಯ ಖಾವಂದರೊಂದಿಗೆ ನಾವಿದ್ದೇವೆ. ಎಂಬ ಘೋಷಣೆಯೊಂದಿಗೆ ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತ ವೃಂದ ನೇತೃತ್ವದಲ್ಲಿ ಉಜಿರೆಯ ಎಸ್. ಡಿ.ಎಂ ಕಾಲೇಜ್ ಮುಂಭಾಗದಲ್ಲಿ ಬೃಹತ್ ಸಮಾವೇಶ ಹಾಗೂ ಹಕ್ಕೊತ್ತಾಯ ಮಂಡನೆ ನಡೆಯಿತು.ಈ ವೇಳೆ ಭಕ್ತರ ಪರವಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನೀಡುವ ಹಕ್ಕೊತ್ತಾಯ ಪತ್ರವನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರಿಗೆ ನೀಡಲಾಯಿತು.ಬಳಿಕ ನೆರೆದ ಭಕ್ತರನ್ನು ಉದ್ದೇಶಿಸಿ ಹರೀಶ್ ಪೂಂಜಾ ರವರು ಮಾತನಾಡಿದರು. ವೇದಿಕೆಯಲ್ಲಿ
ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಸಚಿವ ಅಭಯ ಚಂದ್ರ ಜೈನ್, ಕಾಸರಗೋಡು ಜಿಲ್ಲಾ ಜನ ಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷರಾದ: ಗೋಪಾಲ ಶೆಟ್ಟಿ ಅರಿಬೈಲ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ಅಧ್ಯಕ್ಷರಾದ ವೆಂಕಟ್ರಮಣ ಹೊಳ್ಳ ಕಾಸರಗೋಡು ಸೇರಿದಂತೆ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಪೂರ್ವಬಾವಿ ಯಾಗಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಕ್ಕೊತ್ತಾಯ ವೇದಿಕೆಗೆ ಹರಿದು ಬಂತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆ, ಚಿಕ್ಕಮಗಳೂರು, ಉಡುಪಿ ಜಿಲ್ಲೆ ಸೇರಿದಂತೆ ವಿವಿಧ ಕಡೆಗಳಿಂದ ಸದಸ್ಯರು ಹಾಗೂ ಸಹಸ್ರಾರು ಮಹಿಳೆಯರು ಮಕ್ಕಳು, ವೃದ್ಧರು ಸುರಿಯುವ ಧಾರಾಕಾರ ಮಳೆಯನ್ನ ಲೆಕ್ಕಿಸದೇ ಸುಮಾರು ಭಕ್ತರು ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಿದರು. ಭಾಗವಹಿಸಿದ ಭಕ್ತರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಯಿತು. ಈ ವೇಳೆ ಸೌಜನ್ಯಳ ತಾಯಿ ಕುಸುಮಾವತಿ ಗೌಡ ಸಮಾವೇಶಕ್ಕೆ ಆಗಮಿಸಿದ್ದರು. ಇವರನ್ನ ಸಂಘಟಕರು ವೇದಿಕೆಗೆ ಕರೆಲಿಲ್ಲವೆಂಬುದಾಗಿ ರೊಚ್ಚಿಗೆದ್ದಿದ್ದಾರೆ.


