Breaking Posts

6/trending/recent
Type Here to Get Search Results !

8:10:45

ಶಾಲಾ ವಿದ್ಯಾರ್ಥಿ ಸಾವಿಗೆ ಕಾರಣರಾದ ಪೊಲೀಸರ ಮೇಲೆ ಕೊಲೆ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಿ : ಹರ್ಷಾದ್ ವರ್ಕಾಡಿ.

ಶಾಲಾ ವಿದ್ಯಾರ್ಥಿ ಸಾವಿಗೆ ಕಾರಣರಾದ ಪೊಲೀಸರ ಮೇಲೆ ಕೊಲೆ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಿ : ಹರ್ಷಾದ್ ವರ್ಕಾಡಿ. ಮಂಜೇಶ್ವರ : ವಿದ್ಯಾಥಿಗಳು ಸಂಚರಿಸುತ್ತಿದ್ದ ಕಾರನ್ನು ವಿನಾಕಾರಣ ಬೆನ್ನಟ್ಟಿ, ಅಟ್ಟಹಾಸಗೈದು ಕಾರು ಅಪಘಾತವಾಗುವಂತೆ ಮಾಡಿದ ಆರೋಪ ಕೇಳಿಬರುತ್ತಿದ್ದು, ಈ ಬಗ್ಗೆ ಕೂಡಲೇ ಸಮಗ್ರ ತನಿಖೆ ನಡೆಸಿ, ವಿದ್ಯಾರ್ಥಿ ಸಾವಿಗೆ ಕಾರಣರಾದ ಪೋಲೀಸರ ಮೇಲೆ ಕೊಲೆಪ್ರಕರಣ ದಾಖಲಿಸಿ, ಅವರನ್ನು ಕೂಡಲೇ ಬಂಧಿಸಬೇಕೆಂದು ಕಾಸರಗೋಡು ಜಿ.ಪಂ.ಮಾಜೀ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಆಗ್ರಹಿಸಿದ್ದಾರೆ. ಮೊನ್ನೆ ಶಾಲೆಯಿಂದ ತೆರಳುತ್ತಿದ್ದ ವಿದ್ಯಾರ್ಥಿಗಳ ಕಾರನ್ನು ಪೊಲೀಸರು ಬೆನ್ನಟ್ಟಿದ ಕಾರಣ ಕಾರು ಮಗುಚಿಬಿದ್ದಿದ್ದು, ಗಾಯಗೊಂಡು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ
ಪೇರಲ್ ಕಣ್ಣೂರು ಕುನ್ನಿಲ್ ನಿವಾಸಿ ದಿವಂಗತ ಅಬ್ದುಲ್ಲಾ ಎಂಬವರ ಪುತ್ರ ಪುತ್ತಿಗೆ ಅಂಗಡಿ ಮೊಗರು ಶಾಲೆಯ +2 ವಿದ್ಯಾರ್ಥಿ ಫರ್ಹಾಸ್ (18) ಮೃತಪಟ್ಟಿದ್ದು, ವಿದ್ಯಾರ್ಥಿಯ ಸಾವಿಗೆ ಕಾರಣರಾದ ಪೊಲೀಸರನ್ನು ಅಮಾಗೊಳಿಸಿ, ಕೂಡಲೇ ಬಂಧಿಸಿ ನ್ಯಾಯಾಂಗ ತನಿಖೆ ಮಾಡಬೇಕೆಂದು ಹರ್ಷಾದ್ ವರ್ಕಾಡಿ ಆಗ್ರಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.