ಸಿರಿಬಾಗಿಲು ಪ್ರತಿಷ್ಠಾನದಲ್ಲಿ ರಾಮಾಯಣ ಮಾಸಾಚರಣೆಯ ಮೂರನೇ ದಿನದ ಕಾರ್ಯಕ್ರಮ.
ಆಗಸ್ಟ್ 13, 2023
0
ಸಿರಿಬಾಗಿಲು ಪ್ರತಿಷ್ಠಾನದಲ್ಲಿ ರಾಮಾಯಣ ಮಾಸಾಚರಣೆಯ ಮೂರನೇ ದಿನದ ಕಾರ್ಯಕ್ರಮ.
ಕಾಸರಗೋಡು: ಸಿರಿಬಾಗಿಲು ಪ್ರತಿಷ್ಠಾನದಲ್ಲಿ ನಡೆಯುವ ರಾಮಾಯಣ ಮಾಸಾಚರಣೆ ಪ್ರಯುಕ್ತ ತಾಳಮದ್ದಳೆ- ಭಜನೆ- ಪ್ರವಚನ ಸಪ್ತಾಹ ಕಾರ್ಯಕ್ರಮದ ಮೂರನೇ ದಿನ ಶ್ರೀಕೃಷ್ಣ ಹೊಳ್ಳ ನೀರಾಳ, ಮಾಜಿ ಅಧ್ಯಕ್ಷರು, ಕೂಟಮಹಾಗತ್ತು ಕಾಸರಗೋಡು ಅಂಗಸಂಸ್ಥೆ ಇವರು ದೀಪಪ್ರಜ್ವಲನೆ ಮಾಡಿ ಶುಭಹಾರೈಸಿ, ಚಾಲನೆ ನೀಡಿದರು. ಸರಯೂ ಬಾಲ ಯಕ್ಷ ವೃಂದದ ಅಧ್ಯಕ್ಷರಾದ ರವಿ ಅಲೆವೂರಾಯ ಉಪಸ್ಥಿತರಿದ್ದರು. ಬಳಿಕ ಸರಯೂ ಬಾಲ ಯಕ್ಷ ವೃಂದ (ರಿ.) ಕೋಡಿಕಲ್ಲು,ಮಂಗಳೂರು ಇವರಿಂದ "ಪಂಚವಟಿ" ಯಕ್ಷಗಾನ ತಾಳಮದ್ದಳೆ ಜರುಗಿತು.

