Breaking Posts

6/trending/recent
Type Here to Get Search Results !

8:10:45

43 ನೇ ವರ್ಷದ ಮಂಜೇಶ್ವರ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಶ್ರೀ ಮಹಾಗಣಪತಿ ವಿಗ್ರಹ ರಚನೆಗೆ ಮೂಹೂರ್ತ

43 ನೇ ವರ್ಷದ ಮಂಜೇಶ್ವರ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಶ್ರೀ ಮಹಾಗಣಪತಿ ವಿಗ್ರಹ ರಚನೆಗೆ ಮೂಹೂರ್ತ.
ಮಂಜೇಶ್ವರ: 43 ನೇ ವರ್ಷದ ಮಂಜೇಶ್ವರ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಶ್ರೀ ಮಹಾಗಣಪತಿಯ ವಿಗ್ರಹ ರಚನೆ ಮೂಹೂರ್ತ ಇಂದು ಬೆಳಿಗ್ಗೆ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆಯಿತು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ತಿರುಮಲೇಶ್ ಆಚಾರ್ಯ ವೈದಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.
ವಿಗ್ರಹ ರಚನೆಕಾರರಾದ ಶಿಲ್ಪಿ ಮಹೇಶ್ ಆಚಾರ್ಯ ಬಾಯಾರು ಮುಹೂರ್ತ ಕಾರ್ಯಕ್ರಮವನ್ನು ನೆರವೇರಿಸಿದರು. ಈ ವೇಳೆ ಸಾರ್ವಜನಿಕ ಗಣೇಶೋತ್ಸವದ ಸಮಿತಿಯ ಅಧ್ಯಕ್ಷರಾದ ನ್ಯಾ. ನವೀನ್ ರಾಜ್, ಪ್ರಧಾನ ಕಾರ್ಯದರ್ಶಿ ಅವಿನಾಶ್ ಹೆಗ್ಡೆ ಮಂಜೇಶ್ವರ, ಕೋಶಾಧಿಕಾರಿ ಚಿನ್ಮಯಾನಂದ ಆಚಾರ್ಯ, ಪ್ರಧಾನ ಸಂಚಾಲಕ ಪದ್ಮನಾಭ ಕಡಪ್ಪರ, ಸಂಘಟನಾ ಕಾರ್ಯದರ್ಶಿ ಹರೀಶ್ ಶೆಟ್ಟಿ ಮಾಡ, ಗೌರವ ಸಲಹೆಗಾರದಂತಹ ಹೈಮೇಶ್ ಬಿ.ಎಂ, ದಿನಕರ್ ಬಿ.ಎಂ ಉಪಾಧ್ಯಕ್ಷರಾದ ಕೃಷ್ಣ ಜಿ ಮಂಜೇಶ್ವರ, ಸುನಿಲ್ ಕುಮಾರ್, ಶಿವಪ್ರಸಾದ್ ಪೆಲಪ್ಪಾಡಿ, ನವೀನ್ ಕೌಡೂರು ಆದರ್ಶ್ ಬಿ ಎಂ, ಹಾಗೂ ಸಮಿತಿಯ ಸದಸ್ಯರು ಭಾಗವಹಿಸಿದ್ದರು. ಸಾರ್ವಜನಿಕ ಮಂಜೇಶ್ವರ ಗಣೇಶೋತ್ಸವ ಸೆಪ್ಟೆಂಬರ್ 19 ರಿಂದ ಪ್ರಾರಂಭಗೊಂಡು ಸೆಪ್ಟೆಂಬರ್ 22 ರ ವರೆಗೆ ಜರುಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.