ಬೇಕರಿ ಕಾರ್ಮಿಕ ಮೊರತ್ತನೆ ನಿವಾಸಿ ರೋಹಿತಾಕ್ಷ (45) ನಾಪತ್ತೆಯಾಗಿ 4 ತಿಂಗಳು ಕಳೆದರೂ ಮಾಹಿತಿ ಅಲಭ್ಯ. ಪತ್ನಿ, ಮಗಳು, ಮನೆ ಮಂದಿ ಆಂತಂಕದಲ್ಲಿ.
ಆಗಸ್ಟ್ 20, 2023
0
ಬೇಕರಿ ಕಾರ್ಮಿಕ ಮೊರತ್ತನೆ ನಿವಾಸಿ ರೋಹಿತಾಕ್ಷ (45) ನಾಪತ್ತೆಯಾಗಿ 4 ತಿಂಗಳು ಕಳೆದರೂ ಮಾಹಿತಿ ಅಲಭ್ಯ. ಪತ್ನಿ, ಮಗಳು, ಮನೆ ಮಂದಿ ಆಂತಂಕದಲ್ಲಿ.
ಮಂಜೇಶ್ವರ: ಬೇಕರಿ ಕಾರ್ಮಿಕನೋರ್ವ ನಾಪತ್ತೆಯಾಗಿ 4 ತಿಂಗಳು ಕಳೆದರೂ ಇದುವರೆಗೆ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಮೊರತ್ತನೆ ನಿವಾಸಿ ದಿ. ಬಾಬು ಎಂಬವರ ಪುತ್ರ ರೋಹಿತಾಕ್ಷ (45) ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ. ಇವರು ದೈಗೋಳಿಯಲ್ಲಿ ಬೇಕರಿ ಕಾರ್ಮಿಕರಾಗಿದ್ದರು. ಕಳೆದ ಏಪ್ರಿಲ್ ತಿಂಗಳ 4 ರಂದು ಬೆಳಗ್ಗೆ ಕೆಲಸಕ್ಕೆಂದು ತಿಳಿಸಿ ಮನೆಯಿಂದ ತೆರಳಿದ್ದು, ಅವರು ಬೇಕರಿಗೂ ತಲುಪದೇ ಸಂಜೆ ಮನೆಗೂ ಬಾರದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಮನೆಯವರು, ಕುಟುಂಬದವರು ಹಾಗೂ ಸ್ನೇಹಿತರು ಹಲವು ಕಡೆಗಳಿಗೆ ತೆರಳಿ ಹುಡುಕಾಡಿದರೂ ಇವತ್ತಿನ ತನಕ ಪತ್ತೆಹಚ್ಚಲಾಗಲಿಲ್ಲ. ಯಾವುದೇ ಸುಳಿವು ಕೂಡಾ ಲಭ್ಯವಾಗಿಲ್ಲ. ನಾಪತ್ತೆಯಾದ ದಿನವೇ ಸಹೋದರ ಗಂಗು ಮೊರತನೆಯವರು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಕೇಸು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ. ಸೈಬರ್ ಸೆಲ್ ಮೂಲಕ ತಪಾಸಣೆ ನಡೆಸಿದಾಗ ಏಪ್ರಿಲ್ 4 ರಂದು ಬೆಳಗ್ಗೆ 10 ಗಂಟೆಯ ವೇಳೆ ಮಂಜೇಶ್ವರ ಹೊಸಬೆಟ್ಟು ಪರಿಸರದಲ್ಲಿ ಸಿಗ್ನಲ್ ಕಂಡುಬಂದಿರುವುದಾಗಿ ಬಳಿಕ ಅಲ್ಪ ಹೊತ್ತಿನಲ್ಲಿ ಪೋನ್ ಸ್ವಿಚ್ ಆಫ್ ಆಗಿರುವುದಾಗಿ ಪೊಲೀಸರು ತಿಳಿಸಿದ್ದರು. ರೋಹಿತಾಕ್ಷ ನಾಪತ್ತೆಯಾಗಿ ಇದೀಗ 4 ತಿಂಗಳು ಕಳೆದರೂ ಪತ್ನಿ ಲೀಲಾವತಿ, ಏಕ ಪುತ್ರಿ ಅನ್ಸಿಕ ಹಾಗೂ ಮನೆ ಮಂದಿ ಆತಂಕದಲ್ಲಿದ್ದು, ರೋಹಿತಾಕ್ಷರ ಬರುವಿಕೆಗಾಗಿ ಖಾತರದಿಂದ ಕಾಯುತ್ತಾ ಕೂತಿದ್ದಾರೆ. ಯಾರಿಗಾದರೂ ರೋಹಿತಕ್ಷರ ಬಗ್ಗೆ ಮಾಹಿತಿ ಲಭ್ಯವಾದರೆ ಮಂಜೇಶ್ವರ ಪೊಲೀಸ್ ಠಾಣೆ ಅಥವಾ ಸಹೋದರ ಗಂಗು ಮೊರತ್ತನೆಯವರ 8129986511ಗೆ ಸಂಪರ್ಕಿಸಲು ಕೋರಲಾಗಿದೆ.

