ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದಲ್ಲಿ ಆರಾಧಿಸಲ್ಪಡುವ "ಗರುಡ" ದೇವರ ಗುಡಿಯ ಅರ್ಚಕ: ನರಸಿಂಹ ಭಟ್ (52) ಅಸೌಖ್ಯ ನಿಮಿತ್ತ ನಿಧನ.
ಆಗಸ್ಟ್ 28, 2023
0
ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದಲ್ಲಿ ಆರಾಧಿಸಲ್ಪಡುವ "ಗರುಡ" ದೇವರ ಗುಡಿಯ ಅರ್ಚಕ: ನರಸಿಂಹ ಭಟ್ (52) ಅಸೌಖ್ಯ ನಿಮಿತ್ತ ನಿಧನ.
ಮಂಜೇಶ್ವರ: ಹದಿನೆಂಟು ಪೇಟೆಗಳ ಕ್ಷೇತ್ರವೆಂದೇ ಖ್ಯಾತಿಯನ್ನು ಪಡೆದ ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನದಲ್ಲಿ ಆರಾಧಿಸಲ್ಪಡುವ "ಗರುಡ" ದೇವರ ಗುಡಿಯಲ್ಲಿ ಕಳೆದ 22 ವರ್ಷಗಳಿಂದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರವ ನರಸಿಂಹ ಭಟ್ (52) ಅಸೌಖ್ಯ ನಿಮಿತ್ತ ಕಳೆದೆರಡು ದಿನಗಳಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕತ್ಸೆ ಫಲಕಾರಿಯಾಗದೇ ನಿನ್ನೆ ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಕ್ಷೇತ್ರದ "ಶ್ರೀ ವಿಭುದೇಂದ್ರ ಕಲ್ಯಾಣ ಮಂಟಪ" ದ ಬಳಿಯ ನಿವಾಸಿಯಾಗಿದ್ದಾರೆ. ಕ್ಷೇತ್ರದಲ್ಲಿ ಈ ಹಿಂದೆ ಅರ್ಚಕರಾಗಿದ್ದ ದಿ. ಅನಂತ ಶ್ರೀಧರ ಭಟ್ ರ ಪುತ್ರರಾಗಿರುವ ನರಸಿಂಹ ಭಟ್ ರವರು ಪತ್ನಿ: ನವ್ಯ, ಸಹೋದರ ಸಹೋದರಿಯಾಗಿರುವ: ಪ್ರಭಾಕರ ಭಟ್ (ಅರ್ಚಕರು ಶ್ರೀ ಕ್ಷೇತ್ರ ಮಂಜೇಶ್ವರ), ಪೂರ್ಣಿಮಾ, ಕುಸುಮ, ವಿಜಯ ಹಾಗೂ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆ ನಿನ್ನೆ ಅಪರಾಹ್ನ ಮಂಜೇಶ್ವರ ಹೊಸಬೆಟ್ಟುವಿನಲ್ಲಿರುವ ಜಿ.ಎಸ್. ಬಿ ಸಮುದಾಯದ ರುದ್ರ ಭೂಮಿಯಲ್ಲಿ ನಡೆಯಿತು. ಮೃತರ ನಿಧನಕ್ಕೆ ಕ್ಷೇತ್ರದ ಆಡಳಿತ ಮಂಡಳಿ, ಟ್ರಸ್ಟಿಗಳು, ಸದಸ್ಯರುಗಳು, ಜಿ.ಎಸ್. ಬಿ. ಸಂಘ, ಕ್ಷೇತ್ರದ ಅರ್ಚಕ ವೃಂದ ಗಾಢವಾದ ಸಂತಾಪ ಸೂಚಿಸಿದ್ದಾರೆ.
