Breaking Posts

6/trending/recent
Type Here to Get Search Results !

8:10:45

ಮಂಜೇಶ್ವರ ಉಪಜಿಲ್ಲಾ ಸಮಾಜ ವಿಜ್ಞಾನ ಕ್ಲಬ್ ಅಸೋಸಿಯೇಷನ್ ನೇತೃತ್ವದಲ್ಲಿ ಫ್ರೀಡಂ ಕ್ವಿಜ್ - 2023.

ಮಂಜೇಶ್ವರ ಉಪಜಿಲ್ಲಾ ಸಮಾಜ ವಿಜ್ಞಾನ ಕ್ಲಬ್ ಅಸೋಸಿಯೇಷನ್ ನೇತೃತ್ವದಲ್ಲಿ ಫ್ರೀಡಂ ಕ್ವಿಜ್ - 2023.
ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಸಮಾಜ ವಿಜ್ಞಾನ ಕ್ಲಬ್ ಅಸೋಶಿಯೇಶನ್ ನೇತ್ರತ್ವದಲ್ಲಿ ನಡೆದ ಫ್ರೀಡಂ ಕ್ವಿಜ್ – 2023, ಮಂಗಲ್ಪಾಡಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇಂದು ಬೆಳಗ್ಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮ೦ಜೇಶ್ವರ ಉಪ ಜಿಲ್ಲಾಶಿಕ್ಷಣ ಅಧಿಕಾರಿಯಾದ ದಿನೇಶ್ .ವಿ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರುಬೀನ ನೌಫಾಲ್ ನೆರವೇರಿಸಿದರು. ಮಂಗಲ್ಪಾಡಿ ಹೈಯರಿ ಸೆಕೆಂಡರಿ ಶಾಲೆಯ ಪ್ರಿನ್ಸಿಪಲ್ ವಿಜೇತ ವಿದ್ಯಾರ್ಥಿಗಳಿಗೆ ಶುಭಾಶಂಸನೆ ಮಾಡಿದರು. ಮಂಜೇಶ್ವರ ಉಪಜಿಲ್ಲಾ ಸಮಾಜ ವಿಜ್ಞಾನ ಸೆಕ್ರಟರಿ ರಾಜೇಶ್ ಕೊಡ್ಲಮೊಗರು ಸ್ವಾಗತಿಸಿದರು. ಜೋಯಿಂಟ್ ಸೆಕ್ರೆಟರಿ ಶಕೀಲ ಟೀಚರ್ ಬಾಕ್ರಬೈಲ್ ಧನ್ಯವಾದವಿತ್ತರು. ರಸ ಪ್ರಶ್ನೆಯಲ್ಲಿ L.P ವಿಭಾಗದಲ್ಲಿ ನಝಲಿ ಪಾತಿಮ ಪ್ರಥಮ ಸ್ಟೆಂಟ್ ಜೋಸೆಪ್ ಕಲಿಯೂರ್ ಮತ್ತು ದ್ವಿತೀಯ ಸ್ಥಾನ ಬ್ಲೆಸಿಕ ಪ್ರೆಯಾಲ್ ಪೆರ್ಮುದೆ ಗಳಿದರು.
ಯು.ಪಿ ವಿಭಾಗದಲ್ಲಿ ತನ್ವಿ ಐಲ ಬೋವಿಸ್ ಮತ್ತು ಉಪ್ಪಳ ಹೈಸ್ಕೂಲ್ ನಲ್ಲಿ ಕಲಿಯವ ನಿಧಿನ್ಯ ದ್ವಿತೀಯ ಸ್ಥಾನ ಪಡೆದರು. ಹೈಸ್ಕೂಲ್ ವಿಭಾಗದಲ್ಲಿ S.A.T ಶಾಲೆಯ K.P ಪೂಜಾಲಕ್ಷ್ಮಿ ಹಾಗೂ ದ್ವಿತೀಯ ಸಾನವನ್ನು ವಿದ್ಯಾವರ್ಧಕ ಶಾಲೆ ಮಿಯಾಪದವು ಶಾಲೆಯ ಶುಭಾಸಂಶನೆಗೈದರು.
ಹೈಯರ್ ಸೆಕೆಂಡರಿ ವಿಭಾಗದಲ್ಲಿ ಬೇಕೂರು ಶಾಲೆಯ ಆತ್ಮಿಕಾ ರೈ ಪ್ರಥಮ ಸ್ಥಾನ ಮತ್ತು ಮಂಗಲ್ಪಾಡಿ ಹೈಯರ್ ಸೆಕೆಂಡರಿ ಶಾಲೆಯ ಸಿದ್ಧಿಕ್ ದ್ವಿತೀಯ ಸ್ಥಾನ ಪಡೆದರು. ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಚೆರ್ಕಳ ಮಾರ್ತೊಮ ಕಾಲೇಜ್ನಲ್ಲಿ ನಡೆಯುವ ಜಿಲ್ಲಾ ಮಟ್ಟದ ಪ್ರೀಡಂ ಕ್ವಿಜ್ ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಆಯೂಬ್ ಸರ್, ದೇವಿಪ್ರಸಾದ್ ಐಲ, ದಯಾನಂದ ಕುಬಣೂರು, ಇಸ್ಮಾಯಿಲ್ ಮುಳಿಂಜ, ಪ್ರಸೀತ ವಾಮಂಜೂರು, ಸುಮಯ್ಯ ಪ್ರವಳಿಕೆ ನಗರ, ಆನೂಪ್ ಕಡಂಬಾರ್ , ಶಿವ ಪ್ರಸಾದ್ ಚೆರುಗೋಲಿ ಕ್ವೀಜ್ ಮಾಸ್ಟರ್ ಗಳಾಗಿ ಸಹಕರಿಸಿದರು..

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.