ಮಂಜೇಶ್ವರ: ಮಡ್ವಬೀಡು ಮೂಲ ಕುಟುಂಬಿಕರ ತರವಾಡು ಮನೆಯ" ಆಟಿದ ಕೂಟ - ಗೌಜಿ ಗಮ್ಮತ್ತ್" ಕಾರ್ಯಕ್ರಮ ಮಂಜೇಶ್ವರ ಕೊಡ್ಲಮೊಗರು ಮಡ್ವಬೀಡು ಮೂಲ ಮನೆಯಲ್ಲಿ ಬಹಳ ಅರ್ಥಪೂರ್ಣವಾಗಿ ನಡೆಯಿತು. ಯಜಮಾನ ಮಡ್ವಬೀಡು ಸತೀಶ್ ಕುಮಾರ್ ಆಳ್ವಾ ಇರಾ ಬಾಳಿಕೆ ರವರ ಉಪಸ್ಥಿತಿಯಲ್ಲಿ, ಮಡ್ವಬೀಡು ಮೋಹನ್ ದಾಸ್ ಶೆಟ್ಟಿ ಪಿಲಾರ್ ನೇತೃತ್ವದಲ್ಲಿ, ಹಿರಿಯರ ಮಾರ್ಗದರ್ಶನದೊಂದಿಗೆ ನಡೆದ ಈ ಕಾರ್ಯಕ್ರಮವು ತುಳು ನಾಡಿನ ಆಚಾರ ವಿಚಾರ, ಬಂಟ ಸಮುದಾಯದ ಭವ್ಯ ಪರಂಪರೆಯ ಅನುಭೂತಿಯನ್ನ ನೀಡಿತು. ಹಿರಿಯರು-ಕಿರಿಯರು ಮಹಿಳೆಯರು, ಮಕ್ಕಳು ಎನ್ನದೆ ಎಲ್ಲರೂ ವಿವಿಧ ಆಟೋಟ ಸ್ಪರ್ಧೆ ಸಹಿತ ವಿವಿಧ ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು, ಆದರ್ಶ ದಂಪತಿಗಳು ವಿಶಿಷ್ಟ ಕಾರ್ಯಕ್ರಮದ ಮೂಲಕ ಜೋಡಿಗಳ ಸಂಬಂಧವನ್ನು ಇನ್ನಷ್ಟೂ ಬೆಸೆವುವಂತೆ ಮಾಡಿತು, ಕಾರ್ಯಕ್ರಮಕ್ಕೆ ಇಂಪು ನೀಡುವಂತೆ ಕರುವೊಳು ದಿನೇಶ್ ಶೆಟ್ಟಿ ರವರ ಯಕ್ಷಗಾನ ಭಾಗವತಿಕೆ ಮೂದವನ್ನು ನೀಡಿತು, ಕುಟುಂಬದಲ್ಲಿ ಹಿರಿಯವರಾದ ಮಡ್ವಬೀಡು ಮಹಾಬಲ ಭಂಡಾರಿ ಬೊಳುವಾಯಿ ರವರ ಹಳೆಯ ಅನುಭವದ ಮಾತುಗಳ ಹೊರಣ ಕೌತುಕ ಕೆರಳಿಸಿದ್ದು ಸುಳ್ಳಲ್ಲ.
.









.jpg)
.jpg)