Breaking Posts

6/trending/recent
Type Here to Get Search Results !

8:10:45

ಕಾನ್ಯಂಗಾಡ್: ಮಣಿಪುರ ಹಿಂಸಾಚಾರ ಖಂಡಿಸಿ ಲೀಗ್ ಪ್ರತಿಭಟನೆ; "ದ್ವೇಷದ ಘೋಷಣೆ" ಸದಸ್ಯನ ಅಮಾನತು.

 ಕಾನ್ಯಂಗಾಡ್: ಮಣಿಪುರ ಹಿಂಸಾಚಾರ ಖಂಡಿಸಿ ಲೀಗ್ ಪ್ರತಿಭಟನೆ; "ದ್ವೇಷದ ಘೋಷಣೆ" ಸದಸ್ಯನ ಅಮಾನತು.


ಕಾಸರಗೋಡು: ಕಾನ್ಯಂಗಡ್ ನಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಭಾಗವಾಗಿರುವ ಮುಸ್ಲಿಂ ಲೀಗಿನ ಸದಸ್ಯರು "ದ್ವೇಷ ಘೋಷಣೆ"ಗಳನ್ನು ಕೂಗಿದ್ದಾರೆ. ಮಣಿಪುರದ ಹಿಂಸಾಚಾರದ ವಿರುದ್ಧದ ಪ್ರತಿಭಟನೆಯಲ್ಲಿ ಲೀಗ್ ಸದಸ್ಯರು "ದೇವಸ್ಥಾನಗಳ ಮುಂದೆ ನಿಮ್ಮನ್ನು ನೇತುಹಾಕಿ ಸುಟ್ಟು ಹಾಕುತ್ತೇನೆ" ಎಂದು ಘೋಷಣೆ ಕೂಗಿರುವುದಾಗಿ ವರದಿಯಾಗಿದೆ. ಘೋಷಣೆ ಕೂಗಿದ ವ್ಯಕ್ತಿಯನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಪಕ್ಷ ಹೇಳಿದೆ. ಕಾಣ್ಯಂಗಾಡ್ ನಗರಸಭೆಯ ಅಬ್ದುಲ್ ಸಲಾಂ ಎಂಬ ವ್ಯಕ್ತಿಯನ್ನು ಪಕ್ಷದಿಂದ ವಜಾ ಮಾಡಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಕೆ ಫಿರೋಜ್ ಹೇಳಿರುವುದಾಗಿ ಮಲಯಾಳ ಮನೋರಮಾ ವರದಿ ಮಾಡಿದೆ. ಮುಸ್ಲಿಂ ಲೀಗಿನ ವಿಚಾರಗಳಿಗೆ ವ್ಯಕ್ತಿರಿಕ್ತವಾಗಿ ವರ್ತಿಸಿದ್ದಕ್ಕಾಗಿ ಮತ್ತು ಪಕ್ಷವು ಮುದ್ರಿತ ಪ್ರತಿಯಲ್ಲಿ ನೀಡಿರುವ ಘೋಷಣೆಗಿಂತ ವ್ಯಕ್ತಿರಿಕ್ತವಾಗಿ ದ್ವೇಷದ ಘೋಷಣೆ ಕೂಗಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಫಿರೋಜ್ ಹೇಳಿದ್ದಾರೆ. ಅಬ್ದುಲ್ ಸಲಂ ಮಾಡಿದ್ದು ಘೋರ ತಪ್ಪು ಎಂದು ಫಿರೋಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.