..ರಾಜಕೀಯ ವಿಶ್ಲೇಷಣೆ..
ಗತಿಗೆಟ್ಟರೆ ಸಿದ್ಧಾಂತ, ಸ್ವಾಭಿಮಾನ, ಯಾವುದು ಇರಲ್ಲ, ಹೊಂದಣಿಕೆಯೇ ಕೊನೆಯ ಆಸ್ತ್ರ.:- ಆದರ್ಶ್ ಬಿ.ಎಂ.
ಮಂಜೇಶ್ವರ: ಪರಸ್ಪರ ಒಬ್ಬರನೊಬ್ಬರು ಸೋಲಿಸಲು ,ತನ್ನ ಪ್ರತಿಷ್ಠೆ ಎತ್ತಿ ಹಿಡಿಯಲು ಜನ್ಮ ತಾಳಿದ ದೇಶದ ಕೆಲವು ರಾಜಕೀಯ ಪಕ್ಷಗಳ ಇಂದಿನ ಸ್ಥಿತಿ ನೋಡಿದರೆ ಗತಿಗೆಟ್ಟರೆ ಹುಲಿ ಹುಲ್ಲು ತಿನ್ನತೆ ಅನ್ನುವಂತೆ.....
ರಾಜಕೀಯವಾಗಿ ಗತಿಗೆಟ್ಟರೆ ಶತ್ರುವು ಮಿತ್ರನಾಗುತ್ತಾನೆ.
ದೇಶದಲ್ಲಿ ಮೋದಿ-ಬಿಜೆಪಿ ಆಡಳಿತವನ್ನು ಇಲ್ಲವಾಗಿಸಲು ಚಡಪಡಿಸುವ ಪರಸ್ಪರ ವಿರೋಧಿಗಳ ಈಗಿನ ಮಿತ್ರತ್ವ ನೋಡಿದರೆ ಅವರುಗಳು ಹುಟ್ಟುಹಾಕಿದ ರಾಜಕೀಯ ಪಕ್ಷಗಳ ಗುರಿ ಏನಾಗಿತ್ತು ಎನ್ನುವುದು ಸ್ಪಷ್ಟ ವಾಗುತ್ತೆ.
ಅಧಿಕಾರ ಇಲ್ಲದೆ ಚಡಪಡಿಸುವಾಗ ಸಿದ್ಧಾಂತ, ಸ್ವಾಭಿಮಾನ, ಯಾವುದು ಇರುವುದಿಲ್ಲ.
ದೇಶದ ಬಹುತೇಕ ಎಲ್ಲ ಪಕ್ಷಗಳು ಕಾಂಗ್ರೆಸ್ ನ್ನು ವಿರೋದಿಸುದಕಾಗಿಯೇ ಜನ್ಮ ತಾಳಿದ ಪಕ್ಷಗಳು 60%ಕ್ಕೂ ಅಧಿಕವಿದೆ.
ವಿಪರ್ಯಾಸ ಅಂದರೆ ಕಾಂಗ್ರೆಸ್ ನ್ನು ಇಲ್ಲವಾಗಿಸಲು ಹುಟ್ಟಿಕೊಂಡ ಪಕ್ಷಗಳೆಲ್ಲ ದೇಶದ ಪ್ರಸ್ತುತ ಸನ್ನಿವೇಶ ದಲ್ಲಿ, ಮೋದಿ ಅಲೆಯಿಂದಾಗಿ ಪರಸ್ಪರ ಆಲಿಂಗನ ಮಾಡುತ್ತಿರುವುದು ರಾಜಕೀಯ ತಮಾಷೆ ಅನ್ನೋದಕ್ಕಿಂತ, ರಾಜಕೀಯ ದಿವಳಿತನ ಅನ್ನೊದು ಸೂಕ್ತ.
ಹಲ್ಲಿಲದ ಹಾವು ಆಗಿರುವ ಮಹಾರಾಷ್ಟ್ರ ದ ಉದ್ದವ ಠಾಕ್ರೆ ಯ ಶಿವಸೇನೆ, ಶರದ್ ಪವಾರ್ ರ
ಎನ್ ಸಿ ಪಿ,
ಕೇರಳದಲ್ಲಿ ಪರಸ್ಪರ ಕಚ್ಚಾಡುವ ಎಡರಂಗ ಸಿಪಿಐ ಎಂ, ಮತ್ತು ಕಾಂಗ್ರೆಸ್ ಕೇರಳ ಗಡಿ ದಾಟಿದ ಕೂಡಲೇ ಪರಸ್ಪರ ಜೊತೆಯಾಗಿರೋದು ಅನೈತಿಕ ಬಂದವೇ ಅಥವಾ ರಾಜಕೀಯ ಗತಿಗೆಡಿನ ಬರಡು ತನವೇ?
ಬಂಗಾಳದಲ್ಲಿ 32 ವರ್ಷ ಆಡಳಿತ ಮಾಡಿದ ಸಿಪಿಎಂ ಇಂದು ಅಲ್ಲಿ ನೆಲೆ ಇಲ್ಲ ಅಲ್ಲಿ ತೃಣಮೂಲ ವನ್ನು ಎದುರಿಸಲಾಗದೆ ರಾಜಕೀಯವನ್ನೇ ಬಿಟ್ಟಿರುವ ಎಡರಂಗ ದ ಯೆಚೂರಿ ಮಮತಾ ಬ್ಯಾನರ್ಜಿ, ಯೆಚೂರಿ, ಡಿ ರಾಜ ರಾಹುಲ್ ಗಾಂಧಿ ಅಪ್ಪುಗೆ ನೋಡಿದರೆ ರಾಜಕೀಯ ವಿಶ್ಲೇಷಣೆ ಕಷ್ಟ.
ಸೋನಿಯಾ ಘಂಡಿ upa ಕಾಲದಲ್ಲಿ ಪ್ರಧಾನಿ ಆಗುತ್ತಾರೆ ಎಂದಾಗ ಕಾಂಗ್ರೆಸ್ ಬಿಟ್ಟು ವಿದೇಶೀ ಮಹಿಳೆ ಭಾರತದ ಪ್ರಧಾನಿ ಆಗಭಾರದೆಂದು ಪಕ್ಷದಿಂದ ಹೊರಬಂದು NCP ಸ್ಥಾಪಿಸಿದ ಶರದ್ ಪವಾರ್ ಇಂದು ಯಾವುದೇ ಪವರ್ ಇಲ್ಲದೆ ಸೋನಿಯಾ ರ ಜೊತೆ ಫೋಟೋ ಶೂಟ್ ನಲ್ಲಿ ಕಂಡಾಗ ಇವರುಗಳು ಸೈದ್ದಂತ ಏನು ಎಂಬುದು ಅರ್ಥ ಆಗುತ್ತಿಲ್ಲ.
ಮಹಾರಾಷ್ಟ್ರದ ಶಿವಸೇನೆ, ncp ಬಹುತೇಕ ಶಾಸಕರೆಲ್ಲ ಬಿಜೆಪಿ ಜೊತೆಗಿದ್ದರೆ.
ಕಾಂಗ್ರೆಸ್ ಪಕ್ಷವನ್ನ ನಗ ಶಿಕಾಂತ ಎದುರಿಸುತ್ತಿದ್ದ ಬಾಲ ಸಾಹೇಬ್ ಠಾಕ್ರೆ ಯ ಮಗ ಉದ್ಧವ್ ಇಂದು ಸೋನಿಯರ ಪರಮ ಆತ್ಮ .ರಾಗಿ ಬದಲಾದ ರಾಜಕೀಯದಲ್ಲಿ ಉದ್ದವ ಒಬ್ಬಂಟಿ ಇಂದು.
ದೇಶದ ಆಡಳಿತ ಹಿಂದಿ ವಾಲಾ ಗಳ ಕೈಯಿಂದ ಇಲ್ಲವಾಗಿಸಲು ಕಾಂಗ್ರೆಸ್ ತತ್ವವನ್ನು ವಿರೋದಿಸುತ್ತಿದ್ದ ತಮಿಳು ನಾಡಿನ DMK ಇಂದು ಕಾಂಗ್ರೆಸ್ ಜೊತೆ ಕಾಣುತ್ತಿದೆ, ಈಗ ಹಿಂದಿ ವಾಲಾ ಪಾರ್ಟಿ ಅಲ್ಲ ಇಟಲಿ ಪಾರ್ಟಿ ಎಂದು ಬಡಲಾಗಿದೆಯೇ?
ದೆಹಲಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾದ ಮುಖ್ಯಮಂತ್ರಿ ಆಗಿದ್ದ ಶೀಲಾ ದೀಕ್ಷಿತ್ ಭ್ರಷ್ಟಾಚಾರ ಬಯಲಿಗೆ ತರುತೇನೆ ,ಅದೇ ರೀತಿ upa ಮನಮೋಹನ ಸರಕಾರದ ಬ್ರಹ್ಮ0ಡ ಭ್ರಷ್ಟಾಚಾರ ಹೊರ ತರುತೇನೆ ಎಂದ ಕೇಜ್ರಿವಾಲ್ ಇಂದು ಕಾಂಗ್ರೆಸ್ ಕರೆದ ಘಟಬಂಧನ ದಲ್ಲಿ ಬಂದಿ ಯಾಗಿದ್ದರೆ, ಭ್ರಷ್ಟಾಚಾರ ಕೇಸ್ ನಲ್ಲಿ aap ಪಕ್ಷದ ಬಹುತೇಕ ಮಂತ್ರಿಗಳು ಜೈಲಲ್ಲಿದರೆ.
Jmm, ಕಾಶ್ಮೀರದ pdp, ಬಿಹಾರದ ನಿತೀಶ್, ಮಮತಾ ಬ್ಯಾನರ್ಜಿ,
Jmm ಎಲ್ಲರೂ ಒಂದು ಕಾಲದಲ್ಲಿ ಬಿಜೆಪಿ ಜೊತೆ ಅಧಿಕಾರ ಮಾಡಿದವರು. ಮಂತ್ರಿಗಳು ಅದವರು. ಅವರುಗಳು ರಾಜಕೀಯ ಲಾಭ ಕಾಗಿ ಯಾವಾಗ ಬೇಕಾದರೂ NDA ಜೊತೆ ಸೇರಿವವರು.
ಮಜಾ ಆಗಿರುವುದು ಬಿಹಾರದ ಲಾಲೂ, ನಿತೀಶ್ ಜೋಡಣೆ ಇನ್ನು ಯಾವ ಗಮ್ ಹಚ್ಚಬೇಕಾದಿತು ಅನ್ನೋದೇ ಸಂಶಯ.
ಮತ್ತೆ ಜೊತೆಗಿರುವುದು ಅಸ್ತಿತ್ವವೇ ಇಲ್ಲದ ಫೋರ್ವರ್ಡ್ ಪಾರ್ಟಿಗಳು ಇವರುಗಳಿಗೆ ಈಗ ಸಿದ್ದಂತವು ಇಲ್ಲ ನೆಲೆಯು ಇಲ್ಲ. ಅದೇ ರೀತಿ ಕಾಂಗ್ರೆಸ್ ನಾಯಕತ್ವ ಬಂಡೆದ್ದು ಜನ್ಮ ತಾಳಿರುವ ಕೇರಳ ಕಾಂಗ್ರೆಸ್ A to z.
ಮತ್ತೆ ಇರುವುದು ಧರ್ಮದ ಹೆಸರಿನಲ್ಲಿ ಇರುವ ಮುಸ್ಲಿಂ ಲೀಗ್, ನೇಶನಲ್ ಲೀಗ್, ವೈಕೋ ,
BSP -Sp ಮೈತ್ರಿ ಆದರೆ ಅದು ಅಲ್ಲಿ ಬಿಜೆಪಿ ಪ್ರಚಂಡ ಗೆಲುವಿಗೆ ದಾರಿ ಆಗಲಿದೆ.
ಅಂತೂ ....ಶತ್ರುಗಳೆಲ್ಲ ಸ್ನೇಹಿತರಾಗುವುದು ಕಂಡಾಗ ಗೊತ್ತಾಗುತ್ತಿದೆ.... ಪ್ರಧಾನಿ ನರೇಂದ್ರ ಮೋದಿ ಯವರ ಪ್ರಭಾವ.
ವಿಪರ್ಯಾಸ ಅಂದರೆ ಕರ್ನಾಟಕ ಇಂದು ಇವರ ಆಸ್ಥಾನ ವಾಗಿರುವುದು.
ಜಾಮೀನಿನ ಮೇಲೆ ಇರುವ dk ಶಿವಕುಮಾರ್ ಇವರ ಟ್ರಮ್ ಕಾರ್ಡ್, ಸಂಸದ ಸ್ಥಾನವೇ ಇಲ್ಲದ ಅನಾರ್ಹರಾಗಿರುವ ರಾಹುಲ್ ಇವರ ಸಾರಥಿ...
ಅಂತೂ .....ಚುನಾವಣಾ ಹತ್ತಿರ ಇನ್ನು ಬರುವಾಗ ನೋಡುವ ಯಾರೆಲ್ಲ ಎಲ್ಲಿದ್ದಾರೆ ಎಂದೂ.
ರಾಜಕೀಯ ದಲ್ಲಿ ಯಾವುದು ಅಸ್ಪ್ರಶ್ಯತೆ ಅಲ್ಲ.
✍🏽 ಆದರ್ಶ್ ಬಿ.ಎಂ. ಮಂಜೇಶ್ವರ.

