ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕಿನ ಅಧ್ಯಕ್ಷ ಪತ್ರಕರ್ತ ವಸಂತ್ ಎನ್. ಕೊಣಾಜೆ ಮಾತೃವಿಯೋಗ.
ಮಂಜೇಶ್ವರ/ಉಳ್ಳಾಲ: ಪತ್ರಕರ್ತ ವಸಂತ್ ಕೊಣಾಜೆ ಅವರ ಮಾತೃ ಶ್ರೀ ರತ್ನಮ್ಮ (83) ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, (ಇಂದು) ಶುಕ್ರವಾರ ಸಂಜೆ ಸ್ವ - ಗೃಹದಲ್ಲಿ ನಿಧನರಾದರು. ಮೂಲತಃ ಪನೋಲಿಬೈಲು ಬೊಳ್ಳಾಯಿ ನಿವಾಸಿಯಾಗಿದ್ದು, ಇದೀಗ ಕೊಣಾಜೆ ಕೋಡಿ ಪದವಿನಲ್ಲಿ ವಾಸಿಸುತ್ತಿರುವ ದಿ. ನಾರಾಯಣ ಗಟ್ಟಿಯ ಧರ್ಮಪತ್ನಿಯಾಗಿದ್ದಾರೆ. ಮೃತರು ಮಕ್ಕಳಾದ ಭವಾನಿ, ಗಿರಿಜಾ, ಪಾರ್ವತಿ, ನವೀನ್ ಕೊಣಾಜೆ (ಪ್ರೋಪೆಸರ್ : ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು.), ಪ್ರಭಾವತಿ, ವನಜಾಕ್ಷಿ (ಪ್ರಾಂಶುಪಾಲೆ: ಹಿರಾ ಕಾಲೇಜು ಬಬ್ಬುಕಟ್ಟೆ.), ವಸಂತ್ ಕೊಣಾಜೆ (ವರದಿಗಾರರು: ಉದಯವಾಣಿ ಉಳ್ಳಾಲ.), ಸೊಸೆ: ಲವಿಶಾ, ಅಳಿಯಂದಿರಾದ: ಐತಪ್ಪ ಗಟ್ಟಿ ಕುತ್ತಾರು, ನಾರಾಯಣ ಗಟ್ಟಿ ತೊಕ್ಕೊಟ್ಟು ಓವರ್ ಬ್ರಿಡ್ಜ್, ಸತೀಶ್ ಮಂಗಳೂರು, ವಿಜಯ ಕುಮಾರ್ ಒಂಬತ್ತು ಕೆರೆ, ಸೋಮೇಶ್ವರ. ಏಕ ಸಹೋದರ ಗಂಗಯ್ಯ ಗಟ್ಟಿ ಭಟ್ನಗರ, ತೊಕ್ಕೊಟ್ಟು ಹಾಗೂ ಅಪಾರ ಬಂಧು - ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ (ಶನಿವಾರ) ಮಧ್ಯಾಹ್ನ ನೆರವೇರಲಿದೆ. ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Advt
ಮೃತರ ನಿಧನಕ್ಕೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು, ಗಡಿನಾಡ ಪತ್ರಕರ್ತರು, ಮಂಜೇಶ್ವರ, ಉಳ್ಳಾಲ ಹಾಗೂ ಮಂಗಳೂರಿನ ಪತ್ರಕರ್ತರು ಗಾಢವಾದ ಸಂತಾಪ ಸೂಚಿಸಿದ್ದಾರೆ.

